Home ಟಾಪ್ ಸುದ್ದಿಗಳು ಬುಲ್ಲಿ ಬಾಯಿ ಆ್ಯಪ್ ಕುರಿತು ಸಿಜೆಐಗೆ ಪತ್ರ ಬರೆದ 77 ಮಹಿಳಾ ವಕೀಲರು

ಬುಲ್ಲಿ ಬಾಯಿ ಆ್ಯಪ್ ಕುರಿತು ಸಿಜೆಐಗೆ ಪತ್ರ ಬರೆದ 77 ಮಹಿಳಾ ವಕೀಲರು

ನವದೆಹಲಿ: ನೂರಾರು ಮುಸ್ಲಿಮ್ ಮಹಿಳೆಯರನ್ನು ಮಾರಾಟಕ್ಕಿಟ್ಟ ಬುಲ್ಲಿ ಬಾಯಿ ಆ್ಯಪ್‌ ನ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ. ರಮಣ ಅವರಿಗೆ 77 ಮಹಿಳಾ ವಕೀಲರು ಪತ್ರ ಬರೆದಿದ್ದಾರೆ.

ಬಲಪಂಥೀಯ ಹಿಂದೂಗಳು ಸುಲ್ಲಿ ಡೀಲ್ಸ್ ಮೂಲಕ 80 ಕ್ಕೂ ಅಧಿಕ ಮುಸ್ಲಿಮ್ ಮಹಿಳೆಯರ ಫೋಟೋಗಳನ್ನು ಮಾರಾಟಕ್ಕೆ ಇಟ್ಟ ಸುಮಾರು ಆರು ತಿಂಗಳ ಬಳಿಕ ಇದೀಗ ಬುಲ್ಲಿ ಆ್ಯಪ್‌ ನಲ್ಲಿ ನೂರಾರು ಮುಸ್ಲಿಮ್ ಮಹಿಳೆಯರ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜನವರಿ 1, 2022 ರಂದು ಹಲವಾರು ದೂರುಗಳು ಮತ್ತು ಆಕ್ರೋಶದ ಹಿನ್ನೆಲೆಯಲ್ಲಿ ನಾಲ್ವರು ಮೇಲ್ಜಾತಿಯವರನ್ನು ಬಂಧಿಸಲಾಗಿದೆ.

ಮುಸ್ಲಿಮ್ ಸಮುದಾಯದ ನರಮೇಧಕ್ಕೆ ಕರೆ ನೀಡಿದ ಬಳಿಕ ಇದೀಗ ಸುಲ್ಲಿ ಡೀಲ್ಸ್ ನಂತಹ ಆ್ಯಪ್‌ ಗಳಲ್ಲಿ ಮಹಿಳೆಯರ ಫೋಟೋ ಅಪ್ಲೋಡ್ ಮಾಡಿರುವುದು ಭಾರತದ ಮುಸ್ಲಿಮ್ ಮಹಿಳೆಯರಲ್ಲಿ ತೀವ್ರ ಅಭದ್ರತೆಯ ಭಾವನೆಯನ್ನು ಸೃಷ್ಟಿಸಿವೆ ಎಂದು ವಕೀಲರು ಸಿಜೆಐಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Join Whatsapp
Exit mobile version