Home ಟಾಪ್ ಸುದ್ದಿಗಳು ಜಿಲ್ಲಾ ಮಟ್ಟದ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ನೆಲ್ಯಹುದಿಕೇರಿ ಚಾಂಪಿಯನ್

ಜಿಲ್ಲಾ ಮಟ್ಟದ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ನೆಲ್ಯಹುದಿಕೇರಿ ಚಾಂಪಿಯನ್

ಸಿದ್ದಾಪುರ: ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಆಯೋಜಿಸಿದ ಸಿದ್ದಾಪುರ ರೇಂಜ್ ಮಟ್ಟದ 16ನೇ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ನೆಲ್ಯಹುದಿಕೇರಿ ದಾರುಸ್ಸಲಾಂ ಹೈಯರ್ ಸೆಕೆಂಡರಿ ಮದರಸ ಮರ್‍ಹೂಂ ಉಸ್ಮಾನ್ ಹಾಜಿ ಮೇಮೋರಿಯಲ್ ಚಾಂಪಿಯನ್ ಟ್ರೋಫಿ ಪಡೆದು ಕೊಂಡಿದೆ.

ಮದರಸ ವಿದ್ಯಾರ್ಥಿಗಳಲ್ಲಿನ ಕಲೆ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿಯು ಪ್ರತೀ ಎರಡು ವರ್ಷಕ್ಕೊಮ್ಮೆ ಸ್ಪರ್ಧೆ ಏರ್ಪಡಿಸುತ್ತಿದೆ.

ನಲ್ವತ್ತೇಕರೆ ಶಾದಿಮಹಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ ಸ್ಪರ್ಧೆಯಲ್ಲಿ ನೆಲ್ಯಹುದಿಕೇರಿ ದಾರುಸ್ಸಲಾಂ ಮದರಸ ವಿದ್ಯಾರ್ಥಿಗಳು ಜೂನಿಯರ್, ಸೀನಿಯರ್ ಮತ್ತು ಸೂಪರ್ ಸೀನಿಯರ್ ವಿಭಾಗದಲ್ಲಿ 281 ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ ಸಿದ್ದಾಪುರ ಮುನವ್ವಿರುಲ್ ಇಸ್ಲಾಂ ಮದರಸ 189 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಅರೆಕಾಡು ಮುನೀರುಲ್ ಇಸ್ಲಾಂ ಮದರಸ 111 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದು ಕೊಂಡಿತು.

ಸ್ಪರ್ಧೆಯು ರೇಂಜ್, ಜಿಲ್ಲಾ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದ್ದು, ಜಿಲ್ಲಾ ಮಟ್ಟದ ಸ್ಪರ್ಧೆಯು ಜನವರಿ10ರಂದು ನೆಲ್ಯಹುದಿಕೇರಿ ಶಾದಿ ಮಹಲ್ ಸಭಾಂಗಣದಲ್ಲಿ ನಡೆಯಲಿದೆ.

Join Whatsapp
Exit mobile version