Home ಕರಾವಳಿ ಪ್ರತಿಭಾ ಕುಳಾಯಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯವಾಗಿ ನಿಂದಿಸಿದ “ಧರ್ಮರಕ್ಷಕರು” !

ಪ್ರತಿಭಾ ಕುಳಾಯಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯವಾಗಿ ನಿಂದಿಸಿದ “ಧರ್ಮರಕ್ಷಕರು” !

►ಸಂಘಪರಿವಾರದ ನೀಚ ಮನಸ್ಥಿತಿ ಬಟಾಬಯಲು

ಮಂಗಳೂರು: ಮಾಜಿ ಕಾರ್ಪೋರೇಟರ್ , ಕೆಪಿಸಿಸಿ ಸಂಯೋಜಕಿ ಹಾಗೂ ಇತ್ತೀಚೆಗೆ ಟೋಲ್ ವಿರೋಧಿ ಹೋರಾಟ ಸಮಿತಿಯಲ್ಲಿ ಸಕ್ರಿಯವಾಗಿದ್ದ ಪ್ರತಿಭಾ ಕುಳಾಯಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಘಪರಿವಾರದ ಕಾರ್ಯಕರ್ತರು ಅವಾಚ್ಯವಾಗಿ ನಿಂದಿಸುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.


ಪ್ರತಿಭಾ ಕುಳಾಯಿ ಅವರು ಮಂಗಳೂರಿನ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಲೈವ್ ನಲ್ಲಿ ಮಾತನಾಡುತ್ತಿದ್ದಾಗ, ಅದರ ಕಮೆಂಟ್ ಬಾಕ್ಸ್ ನಲ್ಲಿ ಸಂಘಪರಿವಾರದ ಕೆಲ ಕಾರ್ಯಕರ್ತರು ಅವಾಚ್ಯ ಪದಗಳಿಂದ ಕಮೆಂಟ್ ಮಾಡಿದ್ದು, ಇದರ ಸ್ಕ್ರೀನ್ ಶಾರ್ಟ್ ಗಳು ಹರಿದಾಡುತ್ತಿದೆ.


ಶಿವಾಜಿ ಶೆಟ್ಟಿ, ಮನೋಹರ್ ಶೆಟ್ಟಿ, ಸುಭಶ್ಚಂದ್ರ ಶೆಟ್ಟಿ ಹೀಗೆ ಹಲವು ಮಂದಿ ಅವಾಚ್ಯ ಶಬ್ಧಗಳಿಂದ ತನ್ನ ವಿಕೃತ ಮನಸ್ಥಿತಿಯನ್ನು ಕಮೆಂಟ್ ಮಾಡಿರುವುದು ವೈರಲ್ ಆಗಿದೆ.
ಅಲ್ಲದೆ, ಸುದ್ದಿಗೋಷ್ಠಿಯಲ್ಲಿ ಪ್ರತಿಭಾ ಕುಳಾಯಿ ಅವರು ತಮ್ಮ ವಿರುದ್ಧ ಕೆಲವು ಕುತ್ಸಿತ ಮನಸ್ಸಿನವರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಬರಹಗಳನ್ನು ಪ್ರದರ್ಶಿಸಿ ಹರಿಹಾಯ್ದಿದ್ದಾರೆ.

Join Whatsapp
Exit mobile version