Home ಟಾಪ್ ಸುದ್ದಿಗಳು ನಾಲ್ಕರ ಹರೆಯದ ಬಾಲಕಿಯ ಅತ್ಯಾಚಾರ: ಡಿಎವಿ ಶಾಲೆಯ ಮಾನ್ಯತೆ ರದ್ದತಿಗೆ ಶಿಕ್ಷಣ ಸಚಿವೆ ಸೂಚನೆ

ನಾಲ್ಕರ ಹರೆಯದ ಬಾಲಕಿಯ ಅತ್ಯಾಚಾರ: ಡಿಎವಿ ಶಾಲೆಯ ಮಾನ್ಯತೆ ರದ್ದತಿಗೆ ಶಿಕ್ಷಣ ಸಚಿವೆ ಸೂಚನೆ

ಹೈದರಾಬಾದ್: ನಾಲ್ಕರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಡಿಎವಿ ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸುವಂತೆ ತೆಲಂಗಾಣ ಶಿಕ್ಷಣ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಅವರು ಹೈದರಾಬಾದ್’ನ ಜಿಲ್ಲಾ ಶಿಕ್ಷಣ ಅಧಿಕಾರಿ (ಡಿಇಒ) ಅವರಿಗೆ ಸೂಚಿಸಿದ್ದಾರೆ.

ಸುತ್ತಮುತ್ತಲಿನ ಪ್ರದೇಶದ ಶಾಲೆಗಳಲ್ಲಿ ಮಕ್ಕಳಿಗೆ ಸೂಕ್ತ ವಸತಿ ಕಲ್ಪಿಸುವಂತೆ ಡಿಇಒ ಗೆ ಸೂಚಿಸಲಾಗಿದೆ.

ಬಂಜಾರಾ ಹಿಲ್ಸ್’ನಲ್ಲಿರುವ ಶಾಲೆಯ ಪ್ರಾಂಶುಪಾಲರ ಕಾರು ಚಾಲಕ ನಾಲ್ಕರ ಹರೆಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 364, 376ಎ, 376 ಬಿ ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿ ರಜನಿ ಕುಮಾರ್ ಬಂಜಾರ ಹಿಲ್ಸ್’ನ ಡಿಎವಿ ಶಾಲೆಯ ಪ್ರಾಂಶುಪಾಲರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ರಜನಿ ಕುಮಾರ್ ಶಾಲೆಯ ಡಿಜಿಟಲ್ ವಿಭಾಗಕ್ಕೆ ಆಗಾಗ್ಗೆ ಬರುತ್ತಿದ್ದ ಎಂದು ವರದಿಯಾಗಿದೆ ಮತ್ತು ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಡಿಎವಿ ಶಾಲೆಯ ಪ್ರಾಂಶುಪಾಲರ ನಿರ್ಲಕ್ಷ್ಯ ಧೋರಣೆಗಾಗಿ ಅವರ ವಿರುದ್ಧವೂ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದರು.

Join Whatsapp
Exit mobile version