ಮೈಸೂರು: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿ ರಾಮ ಮಂದಿರ ಕಟ್ಟಿದ ರೀತಿಯಲ್ಲಿ ಮಳಲಿ ಮಸೀದಿಯ ಜಾಗದಲ್ಲೂ ಮೂಲ ದೇವಸ್ಥಾನ ನಿರ್ಮಿಸುತ್ತೇವೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿವಾದಾತ್ಮಕ ಹೇಳಿಕೆ ಮುಖಾಂತರ ರಾಜ್ಯದಲ್ಲಿ ಹೊಸ ಹೊಸ ಕೋಲಾಹಲ ಉಂಟು ಮಾಡುತ್ತಿರುವ ಮುತಾಲಿಕ್ , ಮಳಲಿ ಮಸೀದಿ ಬಿಟ್ಟು ಕೊಡುವುದು ಕನಸಿನ ಮಾತು ಎಂಬ ಎಸ್ ಡಿಪಿಐ ರಾಜ್ಯಾಧ್ಯಕ್ಷರ ಮಾತಿಗೆ, ರಾಜ್ಯದ 30 ಸಾವಿರ ಮಸೀದಿಗಳ ಮೂಲದಲ್ಲಿ ದೇವಸ್ಥಾನಗಳಿವೆ. ಅವುಗಳನ್ನು ವಾಪಸ್ ಪಡೆದೇ ತೀರುತ್ತೇವೆ, ಮಳಲಿಯನ್ನೂ ಅಯೋಧ್ಯೆ ರೀತಿ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಒಡೆದು ರಾಮ ಮಂದಿರ ಕಟ್ಟಿದ ರೀತಿ ಮಳಲಿ ಮಸೀದಿಯನ್ನು ಪಡೆಯುತ್ತೇವೆ ಎಂಬ ಮಾತು ಕರ್ನಾಟಕದಲ್ಲೂ ಹೊಸ ಸಂಘರ್ಷ ನಡೆಸುವ ಹುನ್ನಾರ ಎಂಬ ಮಾತು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ.