Home ಟಾಪ್ ಸುದ್ದಿಗಳು ಟ್ಯಾಂಕರ್ ಹರಿದು ಬಾಲಕ ಸಾವು ಮಾಲೀಕನ ನಾಟಕ ಬಯಲು ಸಿಕ್ಕಿಬಿದ್ದ ಚಾಲಕ

ಟ್ಯಾಂಕರ್ ಹರಿದು ಬಾಲಕ ಸಾವು ಮಾಲೀಕನ ನಾಟಕ ಬಯಲು ಸಿಕ್ಕಿಬಿದ್ದ ಚಾಲಕ

ಬೆಂಗಳೂರು: ಹೆಚ್‍ ಎಸ್‍ ಆರ್ ಲೇಔಟ್ ಬಳಿ ವಾಟರ್ ಟ್ಯಾಂಕರ್ ಹರಿದು ಮೂರು ವರ್ಷದ ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಚಾಲಕ ರಖೀಬ್‌ ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಸಂಬಂಧ ಅಪಘಾತ ನಡೆಸಿದ  ಟ್ಯಾಂಕರ್ ಮಾಲೀಕ ಆನಂದ್ ಪೊಲೀಸ್ ಠಾಣೆಯಲ್ಲಿ ನಾಟಕ‌ ಮಾಡಿ ಚಾಲಕನ ಬದಲಿಸಿ  ಬೇರೆ ಚಾಲಕನನ್ನ ಠಾಣೆಗೆ ಹಾಜರುಪಡಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ.

ಹಣಕೊಟ್ಟು ರಮೇಶ್ ಬಾಬು ಎಂಬಾತನನ್ನು ಪೊಲೀಸರ ಮುಂದೆ ಹಾಜರು ಪಡಿಸಿದ್ದಾನೆ. ಪೊಲೀಸರ ತನಿಖೆ ವೇಳೆ ಅಪಘಾತ ಮಾಡಿದ ಚಾಲಕ ಬೇರೆ ವ್ಯಕ್ತಿ ಎಂಬುದು ಬೆಳಕಿಗೆ ಬಂದಿದೆ. ಹಣದಾಸೆಗೆ ಆರೋಪಿಯಂತೆ ಒಪ್ಪಿಕೊಂಡಿರುವುದಾಗಿ ರಮೇಶ್ ಬಾಬು ಹೇಳಿಕೆ ನೀಡಿದ್ದಾನೆ.

ಇದೇ ವೇಳೆ ಅಪಘಾತ ಎಸಗಿದ ಅಸಲಿ ಚಾಲಕ ರಖೀಬ್ ಎಂಬಾತನನ್ನು ಬಂಧಿಸಲಾಗಿದೆ. ಘಟನೆ ಬಳಿಕ ರಖೀಬ್ ಪರಾರಿಯಾಗಿದ್ದ. ಇದೀಗ ಹೆಚ್‍ ಎಸ್‍ ಆರ್ ಲೇಔಟ್ ಸಂಚಾರ ಪೊಲೀಸರು ಆರೋಪಿ ಚಾಲಕನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಸಂಚಾರ ಪೊಲೀಸರು ನಿನ್ನೆ ವಿಶೇಷ ಕಾರ್ಯಾಚರಣೆ ಕೈಗೊಂಡು ಸುಮಾರು 258 ನೀರಿನ ಟ್ಯಾಂಕರ್ ಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಅಪಘಾತದ ಹಿನ್ನಲೆ:

ಕಳೆದ ಮೇ.26ರಂದು ಮಧ್ಯಾಹ್ನ 1ರ ವೇಳೆ ಹೆಚ್‍ ಎಸ್‍ಆ ರ್ ಲೇಔಟ್ ನ ಶ್ವೇತ ರೆಸಿಡೆನ್ಸಿ ಅಪಾರ್ಟ್‍ ಮೆಂಟ್ ಮುಂದೆ ಅಪಘಾತ ಸಂಭವಿಸಿತ್ತು. ಅಪಾರ್ಟ್‍ ಮೆಂಟ್‍ ಗೆ ನೀರನ್ನು ಲೋಡ್ ಮಾಡಲು ಟ್ಯಾಂಕರ್ ತರಲಾಗಿತ್ತು. ನೀರು ಲೋಡ್ ಮಾಡಿ ಮುಗಿದ ಬಳಿಕ ಟ್ಯಾಂಕರ್ ತಿರುವು ತೆಗೆದುಕೊಳ್ಳುವ ವೇಳೆ ಅವಘಡ ನಡೆದಿದೆ. ಹಿಂದೆ ನೋಡದೆ ಚಾಲಕ ತಿರುವು ತೆಗೆದುಕೊಂಡಿದ್ದಾನೆ.

ಈ ವೇಳೆ ವಾಹನ ಬಾಲಕ ಪ್ರತಿಷ್ಟ್ ಮೇಲೆ ಹರಿದಿದ್ದು, ಚಕ್ರದಡಿ ಸಿಲುಕಿ ಆತ  ಸಾವನ್ನಪ್ಪಿದ್ದ. ಈ ಸಂಬಂಧ ಹೆಚ್‍ ಎಸ್ ಆರ್ ಲೇಔಟ್ ಸಂಚಾರ ಪೊಲೀಸರು  ಪ್ರಕರಣ ದಾಖಲಿಸಿದ್ದರು.

Join Whatsapp
Exit mobile version