Home ಟಾಪ್ ಸುದ್ದಿಗಳು ಪ್ರವಾದಿ ನಿಂದನೆ: ಬಿಜೆಪಿ ವಕ್ತಾರೆಯನ್ನು ಬಂಧಿಸುವಂತೆ ಟ್ವಿಟರ್ ನಲ್ಲಿ ಟ್ರೆಂಡ್

ಪ್ರವಾದಿ ನಿಂದನೆ: ಬಿಜೆಪಿ ವಕ್ತಾರೆಯನ್ನು ಬಂಧಿಸುವಂತೆ ಟ್ವಿಟರ್ ನಲ್ಲಿ ಟ್ರೆಂಡ್

ನವದೆಹಲಿ: ರಾಷ್ಟ್ರೀಯ ವಾಹಿನಿಯೊಂದರಲ್ಲಿ ನಡೆದ ಚರ್ಚೆಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಮತ್ತು ಪವಿತ್ರ ಕುರ್ ಆನ್ ಅನ್ನು ಅವಮಾನಿಸಿದಕ್ಕಾಗಿ ಅವರನ್ನು ಬಂಧಿಸುವಂತೆ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರೆ, ನೂಪುರ್ ಶರ್ಮಾ ಅವರು ರಾಷ್ಟ್ರೀಯ ದೂರದರ್ಶನದಲ್ಲಿ ಪ್ರವಾದಿ ಮುಹಮ್ಮದ್ (ಸ) ಮತ್ತು ಆಯಿಶಾ ಬೀಬಿಯನ್ನು ನಿಂದಿಸಿದ್ದು, ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇದು ಕೋಮು ಗಲಭೆಯನ್ನು ಸೃಷ್ಟಿಸುವ, ಭಾರತದಲ್ಲಿನ ಮುಸ್ಲಿಮರ ಭಾವನೆಗಳನ್ನು ಕೆರಳಿಸುವ ಮತ್ತು ಘಾಸಿಗೊಳಿಸುವ ಗುರಿಯನ್ನು ಹೊಂದಿದೆ ಎಂದು  ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

ಘಟನೆಯ ಬಳಿಕ ನೂಪುರ್ ಶರ್ಮಾಗೆ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ.

Join Whatsapp
Exit mobile version