Home ಟಾಪ್ ಸುದ್ದಿಗಳು ತೆರೆದ ಶವಪೆಟ್ಟಿಗೆಯಲ್ಲಿ ಮಲಗಿದ ಪೋಪ್ ಫ್ರಾನ್ಸಿಸ್: ಶನಿವಾರ ಅಂತ್ಯಕ್ರಿಯೆ

ತೆರೆದ ಶವಪೆಟ್ಟಿಗೆಯಲ್ಲಿ ಮಲಗಿದ ಪೋಪ್ ಫ್ರಾನ್ಸಿಸ್: ಶನಿವಾರ ಅಂತ್ಯಕ್ರಿಯೆ

0

ವ್ಯಾಟಿಕನ್ ಸಿಟಿ: ಏಪ್ರಿಲ್ 21 ರಂದು ನಿಧನರಾದ ಪೋಪ್ ಫ್ರಾನ್ಸಿಸ್ ಅವರ ಮೊದಲ ಫೋಟೋಗಳನ್ನು ವ್ಯಾಟಿಕನ್ ಬಿಡುಗಡೆ ಮಾಡಿದೆ. ಈ ಫೋಟೋಗಳಲ್ಲಿ ಅವರು ಮರದ ಶವಪೆಟ್ಟಿಗೆಯಲ್ಲಿ ಕೆಂಪು ವಸ್ತ್ರದೊಂದಿಗೆ, ಕೈಯಲ್ಲಿ ಜಪಮಾಲೆ ಹಿಡಿದ ಭಂಗಿಯಲ್ಲಿ ಮಲಗಿರುವುದನ್ನು ನೋಡಬಹುದು.

ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿ ಪೋಪ್ ಫ್ರಾನ್ಸಿಸ್ ಅವರ ಶವ ಪೆಟ್ಟಿಗೆಯ ಎದುರು ಪ್ರಾರ್ಥಿಸುತ್ತಿರುವುದನ್ನು ನೋಡಬಹುದು. ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ ಎಂದು ವ್ಯಾಟಿಕನ್ ತಿಳಿಸಿದೆ.

ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ನಡೆಯಲಿದೆ. ಪೋಪ್ ಫ್ರಾನ್ಸಿಸ್ ಅವರ ಸಾರ್ವಜನಿಕ ದರ್ಶನವು ಬುಧವಾರ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಪ್ರಾರಂಭವಾಗಲಿದೆ ಎಂದು ಕಾರ್ಡಿನಲ್‌ ಗಳು ನಿರ್ಧರಿಸಿದ್ದಾರೆ. ಅವರ ಶವಪೆಟ್ಟಿಗೆಯನ್ನು ಅವರು ವಾಸಿಸುತ್ತಿದ್ದ ವ್ಯಾಟಿಕನ್ ಹೋಟೆಲ್‌ ನಿಂದ ಮೆರವಣಿಗೆಯ ಮೂಲಕ ತೆಗೆದುಕೊಂಡು ಹೋದ ನಂತರ ಅಂತ್ಯಕ್ರಿಯೆ ನಡೆಸಲಾಗುವುದು.

ಧಾರ್ಮಿಕ ವಿಧಿವಿಧಾನಗಳ ಮುಖ್ಯಸ್ಥ ಆರ್ಚ್‌ ಬಿಷಪ್ ಡಿಯಾಗೋ ರಾವೆಲ್ಲಿ ಅವರು ಮೆರವಣಿಗೆಗೆ ರೂಬ್ರಿಕ್‌ ಗಳನ್ನು ಬಿಡುಗಡೆ ಮಾಡಿದ್ದಾರೆ. ಮೆರವಣಿಗೆ ಮತ್ತು ಧಾರ್ಮಿಕ ವರ್ಗಾವಣೆಯ ಅಧ್ಯಕ್ಷತೆಯನ್ನು ಕ್ಯಾಮೆರ್ಲೆಂಗೊ ಕಾರ್ಡಿನಲ್ ಕೆವಿನ್ ಫಾರೆಲ್ ವಹಿಸಲಿದ್ದಾರೆ .ಪೋಪ್ ಫ್ರಾನ್ಸಿಸ್ ಸೋಮವಾರ ಪಾರ್ಶ್ವವಾಯುವಿಗೆ ಒಳಗಾಗಿ ನಿಧನರಾಗಿದ್ದರು. ಅವರಿಗೆ 88 ವರ್ಷವಾಗಿತ್ತು.

NO COMMENTS

LEAVE A REPLY

Please enter your comment!
Please enter your name here

Exit mobile version