Home ಟಾಪ್ ಸುದ್ದಿಗಳು ಪಹಲ್ಗಾಮ್ ದಾಳಿ: ನವ ವಿವಾಹಿತೆಯ ಹೃದಯವಿದ್ರಾವಕ ಫೋಟೋ ವೈರಲ್…!

ಪಹಲ್ಗಾಮ್ ದಾಳಿ: ನವ ವಿವಾಹಿತೆಯ ಹೃದಯವಿದ್ರಾವಕ ಫೋಟೋ ವೈರಲ್…!

0

ನವದೆಹಲಿ: ಇತ್ತೀಚೆಗಷ್ಟೇ ವಿವಾಹವಾಗಿದ್ದ ಉತ್ತರ ಭಾರತದ ನವ ಜೋಡಿಯೊಂದು ಹನಿಮೂನ್‌ ಗಾಗಿ ಕಾಶ್ಮೀರದ ಪಹಲ್ಗಾಮ್ ಗೆ ಆಗಮಿಸಿದ್ದ ವೇಳೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಪತಿ ಮೃತಪಟ್ಟಿದ್ದು, ಇದೀಗ ಕೆಂಪು ಮತ್ತು ಬಿಳಿ ಬಣ್ಣದ ಬಳೆ ತೊಟ್ಟಿದ್ದ ನವವಿವಾಹಿತೆ ಪತಿಯ ತಲೆ ಬಳಿ ಕುಳಿತು ರೋಧಿಸುತ್ತಿರುವ ದೃಶ್ಯದ ಫೋಟೋ ದೇಶಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

“ನನ್ನ ಗಂಡನನ್ನು ಹೊಡೆದುರುಳಿಸಿದ್ದಾರೆ…ಪ್ಲೀಸ್‌ ನನ್ನ ಪತಿಯನ್ನು ರಕ್ಷಿಸಿ” ಎಂದು ರೋಧಿಸುತ್ತಿರುವ ನವ ವಿವಾಹಿತೆಯ ವಿಡಿಯೋ ಮನಕಲಕುವಂತಿದೆ.

ಜಮ್ಮು ಕಾಶ್ಮೀರದ ಅನಂತ್ ​ನಾಗ್ ​ನ ಪಹಲ್ಗಾಮ್ ​ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಮದುವೆಯಾಗಿ ಕೇವಲ 7 ದಿನಗಳಷ್ಟೇ ಆಗಿತ್ತು. ಹನಿಮೂನ್ ​ಗೆಂದು ಪತ್ನಿ ಜತೆ ಬಂದಿದ್ದ ವಿನಯ್  ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ.

ಕೊಚ್ಚಿಯಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ರಜೆಯಲ್ಲಿದ್ದರು. ಏಪ್ರಿಲ್ 16ರಂದು ವಿವಾಹವಾಗಿದ್ದರು. 

ವಿನಯ್ ನರ್ವಾಲ್ ಮೂಲತಃ ಕರ್ನಾಲ್ ಜಿಲ್ಲೆಯ ಭುಸ್ಲಿ ಗ್ರಾಮದ ನಿವಾಸಿ. ಅವರ ಕುಟುಂಬ ಸೆಕ್ಟರ್ -7 ರಲ್ಲಿ ವಾಸಿಸುತ್ತಿದೆ. ಬಿ.ಟೆಕ್ ಮಾಡಿದ ನಂತರ, ಅವರು ಭಾರತೀಯ ನೌಕಾಪಡೆಗೆ ಸೇರಿದರು. ಅವರು 3 ವರ್ಷಗಳ ಹಿಂದೆ ಲೆಫ್ಟಿನೆಂಟ್ ಆಗಿ ನೌಕಾಪಡೆಗೆ ಸೇರಿದರು. ಕೊಚ್ಚಿಯಲ್ಲಿ ಕರ್ತವ್ಯವಿತ್ತು. ವಿನಯ್ ಅವರ ತಂದೆ ಪಾಣಿಪತ್‌ನ ಕಸ್ಟಮ್ಸ್ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡಿದ್ದಾರೆ.

ಮಿನಿ ಸ್ವಿಟ್ಜರ್‌ ಲ್ಯಾಂಡ್‌ ಎಂದೇ ಖ್ಯಾತಿಗಳಿಸಿರುವ ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಅಟ್ಟಹಾಸಕ್ಕೆ ಕನ್ನಡಿಗರು ಸೇರಿದಂತೆ 28 ಪ್ರವಾಸಿಗರು ಮೃತಪಟ್ಟಿದ್ದಾರೆ.

ಮೃತಪಟ್ಟವರಲ್ಲಿ ಒಬ್ಬರು ಯುಎಇ ಮತ್ತು ನೇಪಾಳ ಹಾಗೂ ಇಬ್ಬರು ಸ್ಥಳೀಯರು ಸೇರಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version