Home ಟಾಪ್ ಸುದ್ದಿಗಳು ವಿದ್ಯಾರ್ಥಿನಿಯರ ಹಿಜಾಬ್ ತೆಗೆಯಲು ಪೊಲೀಸರ ಬೆದರಿಕೆ: ಕಲಬುರಗಿಯಲ್ಲಿ ಪೋಷಕರ ಪ್ರತಿಭಟನೆ

ವಿದ್ಯಾರ್ಥಿನಿಯರ ಹಿಜಾಬ್ ತೆಗೆಯಲು ಪೊಲೀಸರ ಬೆದರಿಕೆ: ಕಲಬುರಗಿಯಲ್ಲಿ ಪೋಷಕರ ಪ್ರತಿಭಟನೆ

ಕಲಬುರಗಿ: ಶಾಲೆಗೆ ಪೊಲೀಸರು ಏಕಾಏಕಿ ನುಗ್ಗಿ ವಿದ್ಯಾರ್ಥಿನಿಯರು ಧರಿಸಿದ ಹಿಜಾಬ್ ತೆಗೆಸಲು ಒತ್ತಾಯಿಸಿದ ಘಟನೆ ಕಲಬರಗಿ ಜಿಲ್ಲೆಯ ಫರದಾಬಾದ್ ಶಾಲೆಯಲ್ಲಿ ನಡೆದಿದೆ.

ಘಟನೆಯನ್ನು ಖಂಡಿಸಿ  ಪೋಷಕರು ಡಿಡಿಪಿಐ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದ್ದಾರೆ.

ಈ ಬಗ್ಗೆ ಪೊಲೀಸರೊಂದಿಗೆ ಪ್ರಶ್ನೆ ಮಾಡಿದ ಶಾಲೆಯ ಮುಖ್ಯೋಪಾಧ್ಯಾಯರು, ಹಿಜಾಬ್ ತೆಗೆದು ಬರಬೇಕು ಎಂದು ನಮಗೆ ಡಿಡಿಪಿಐಯಿಂದ ಯಾವುದೇ ಸೂಚನೆ ಬಂದಿಲ್ಲ. ನೀವು ಈ ರೀತಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

 ಆದರೆ ಇದಕ್ಕೆ ಒಪ್ಪದ ಪೊಲೀಸರು, ನಮಗೆ ಆದೇಶ ಬಂದಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬುರ್ಕಾ, ಹಿಜಾಬ್ ತೆಗೆಯಬೇಕು. ತೆಗೆಯದಿದ್ದರೆ ನಿಮ್ಮ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು ಎಂದು ಮುಖ್ಯೋಪಾಧ್ಯಾಯರಿಗೆ ಬೆದರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪೋಷಕರು ಪೊಲೀಸರು ವಿರುದ್ಧ ಪ್ರತಿಭಟನೆ ನಡೆಸಿದರು.

Join Whatsapp
Exit mobile version