ಪಾಟ್ನಾ: ಬ್ರಿಟಿಷರ ವಿರುದ್ಧ ಚಂಪಾರಣ್ಯ ಸತ್ಯಾಗ್ರಹ ನಡೆದ ಸ್ವಲ್ಪ ದೂರದ ಪಾರ್ಕಿನಲ್ಲಿದ್ದ ರಾಷ್ಟ್ರಪಿತ ಮಹಾತ್ವಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆ ಬಿಹಾರದ ಮೋತಿಹಾರಿ ಎಂಬಲ್ಲಿ ನಡೆದಿದೆ.
ಘಟನೆಯ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಮೋತಿಹಾರಿ ಎಂಬಲ್ಲಿನ ಚರಕ ಪಾರ್ಕ್ ನಲ್ಲಿದ್ದ ಗಾಂಧಿ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ಎಸೆದಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಕಿಡಿಗೇಡಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಚಂಪಾರಣ್ಯ ಜಿಲ್ಲಾಧಿಕಾರಿ ಶಿರ್ಷತ್ ಕಪಿಲ್ ಅಶೋಕ್ ತಿಳಿಸಿದ್ದಾರೆ.
ಘಟನೆಯ ಮೊದಲು ಬಲಪಂಥೀಯರು ಧಾರ್ಮಿಕ ಪ್ರಚೋದನಾಕಾರಿ ಘೋಷಣೆ ಕೂಗಿದ್ದರು ಎಂದು ಹೇಳಲಾಗಿದೆ.
1917 ರಲ್ಲಿ ಮಹಾತ್ಮಾ ಗಾಂಧೀಜಿ, ಮೊದಲ ಬಾರಿಗೆ ಸತ್ಯಾಗ್ರಹವನ್ನು ಬಿಹಾರದ ಚಂಪಾರಣ್ಯದಲ್ಲಿ ಆಯೋಜಿಸಿದ್ದರು.