Home ಟಾಪ್ ಸುದ್ದಿಗಳು ರಂಝಾನ್ ವೇಳೆ ತಡರಾತ್ರಿ ವರೆಗೆ ಅಂಗಡಿ ತೆರೆದಿಟ್ಟ ಮುಸ್ಲಿಮ್ ವ್ಯಕ್ತಿಯ ಮೇಲೆ ಪೊಲೀಸ್ ದೌರ್ಜನ್ಯ; ವೀಡಿಯೋ...

ರಂಝಾನ್ ವೇಳೆ ತಡರಾತ್ರಿ ವರೆಗೆ ಅಂಗಡಿ ತೆರೆದಿಟ್ಟ ಮುಸ್ಲಿಮ್ ವ್ಯಕ್ತಿಯ ಮೇಲೆ ಪೊಲೀಸ್ ದೌರ್ಜನ್ಯ; ವೀಡಿಯೋ ವೈರಲ್

ಔರಂಗಾಬಾದ್: ರಂಝಾನ್ ವೇಳೆ ತಡರಾತ್ರಿ ವರೆಗೆ ಅಂಗಡಿ ತೆರೆದಿದ್ದಕ್ಕಾಗಿ ಪೊಲೀಸ್ ಕಾನ್ ಸ್ಟೇಬಲ್ ನೋರ್ವ ಮುಸ್ಲಿಮ್ ವ್ಯಕ್ತಿಗೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಈ ನಡೆಗೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮುಸ್ಲಿಮರ ಪವಿತ್ರ ರಂಝಾನ್ ತಿಂಗಳ ಕೊನೆಯ ಭಾಗದಲ್ಲಿ ಈದ್ ಆಚರಣೆಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಲು ಮಾರುಕಟ್ಟೆಗೆ ಜನರು ಬರುವುದು ವಾಡಿಕೆ. ಇದಕ್ಕಾಗಿ ಮಳಿಗೆ ಮಾಲಕರು ತಡರಾತ್ರಿ ಅಂಗಡಿಗಳನ್ನು ತೆರೆದಿಡುತ್ತಾರೆ.

ಇದನ್ನೇ ನೆಪವಾಗಿಟ್ಟು ಪೊಲೀಸ್ ಅಧಿಕಾರಿಗಳು ಶಾಪಿಂಗ್ ಕಾಂಪ್ಲೆಕ್ಸ್ ಬಂದು, ಅಲ್ಲಿದ್ದ ವ್ಯಕ್ತಿಯೊಬ್ಬನನ್ನು ಎಳೆದು ಹಾಕಿ ಮುಖದ ಭಾಗಕ್ಕೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

Join Whatsapp
Exit mobile version