ದುಬೈ: ಮಾಟಮಂತ್ರದ ಹೆಸರಿನಲ್ಲಿ ಹಣ ಸಂಪಾದಿಸುತ್ತಿದ್ದ ಇಬ್ಬರು ಅರಬ್ ಪ್ರಜೆಗಳನ್ನು ದುಬೈಯ ಅಜ್ಮಾನ್ ನಲ್ಲಿ ಬಂಧಿಸಲಾಗಿದೆ.
ಈ ಇಬ್ಬರು ಹೊಟೇಲ್ ವೊಂದರಲ್ಲಿ ವಾಮಾಚಾರ ನಡೆಸುವುದಕ್ಕಾಗಿ ಸಿದ್ಧತೆ ನಡೆಸುತ್ತಿರುವಾಗಲೇ ರೆಡ್ ಹ್ಯಾಂಡಾಗಿ ಬಂಧಿಸಿದ್ದಾಗಿ ಅಜ್ಮಾನ್ ಸಿಐಡಿ ವಿಭಾಗದ ಲೆಫ್ಟಿನೆಂಟ್ ಕರ್ನಲ್ ಅಹ್ಮದ್ ಸಯೀದ್ ತಿಳಿಸಿದ್ದಾರೆ.
ಸಿಐಡಿ ಪೊಲೀಸರು ಖಚಿತ ಮಾಹಿತಿ ಪಡೆದ ಬಳಿಕ ಒಬ್ಬ ವ್ಯಕ್ತಿಯನ್ನು ಅವರನ್ನು ಸಂಪರ್ಕಕ್ಕೆ ಸಿಗುವಂತೆ ಮಾಡಿದ್ದರು. ಬಳಿಕ ಮಾಟ ಮಂತ್ರ ನಡೆಸುವ ಕುರಿತಾಗಿ ಅವರಲ್ಲಿ ಡೀಲ್ ಕುದುರಿಸುವಂತೆ ಸೂಚಿಸಿದ್ದರು. ಅಂತೆಯೇ 10ಸಾವಿರ ದಿರ್ಹಮ್ ಪಡೆದುಕೊಂಡು ಮಾಟ ಮಂತ್ರ ಕಾರ್ಯ ನಡೆಸಲು ಆರೋಪಿಗಳು ಒಪ್ಪಿಕೊಂಡಿದ್ದರು.
ಬಂಧಿತರಿಂದ ಅವರು ಮಾಟ ಮಂತ್ರ ನಡೆಸಲು ಬಳಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾಗಿ ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.