Home ಟಾಪ್ ಸುದ್ದಿಗಳು ತಾಜ್ ಮಹಲ್ ಆವರಣದಲ್ಲಿ ಕೇಸರಿ ಧ್ವಜ ಹಾರಿಸಿದ ನಾಲ್ವರ ಬಂಧನ

ತಾಜ್ ಮಹಲ್ ಆವರಣದಲ್ಲಿ ಕೇಸರಿ ಧ್ವಜ ಹಾರಿಸಿದ ನಾಲ್ವರ ಬಂಧನ

ನವದೆಹಲಿ : ಜಗದ್ವಿಖ್ಯಾತ ಜನಪ್ರಿಯ ಪ್ರವಾಸಿ ತಾಣ ಆಗ್ರಾದ ತಾಜ್ ಮಹಲ್ ಆವರಣದಲ್ಲಿ ಕೇಸರಿ ಧ್ವಜ ಹಾರಿಸಿದ ಆರೋಪದಲ್ಲಿ ಪೊಲೀಸರು ಹಿಂದೂ ಜಾಗರಣ್ ಮಂಚ್ ಕಾರ್ಯಕರ್ತರು ಎನ್ನಲಾದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಜ್ ಮಹಲ್ ನಲ್ಲಿ ಕೇಸರಿ ಧ್ವಜ ಹಾರಿಸಿದ್ದ ವೀಡಿಯೊವೊಂದು ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ವಶಕ್ಕೆ ಪಡೆಯಲಾದ ಆರೋಪಿಗಳನ್ನು ಗೌರವ್ ತಲ್ವಾರ್, ರಿಷಿ ಲವಾನಿಯಾ, ಸೋನು ಭಗೇಲ್, ವಿಶೇಷ್ ಕುಮಾರ್ ಎಂದು ಗುರುತಿಸಲಾಗಿದೆ.

Join Whatsapp
Exit mobile version