Home ಟಾಪ್ ಸುದ್ದಿಗಳು ಈಶಾ ಹೋಂ ಸ್ಕೂಲ್‌ ನ ನಾಲ್ವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಈಶಾ ಹೋಂ ಸ್ಕೂಲ್‌ ನ ನಾಲ್ವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

0

ಚೆನ್ನೈ: ಈಶಾ ಫೌಂಡೇಷನ್‌ ನಡೆಸುತ್ತಿರುವ ಸ್ಕೂಲ್‌ ನ ನಾಲ್ವರು ಸಿಬ್ಬಂದಿ ಮತ್ತು ಈಶಾ ಹೋಂ ಸ್ಕೂಲ್‌ ನ (ಐಎಚ್‌ಎಸ್‌) ಮಾಜಿ ವಿದ್ಯಾರ್ಥಿಯ ವಿರುದ್ಧ ಕೊಯಮತ್ತೂರು ಜಿಲ್ಲಾ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಮತ್ತೊಬ್ಬ ಮಾಜಿ ವಿದ್ಯಾರ್ಥಿಯ ತಂದೆ–ತಾಯಿ ನೀಡಿದ್ದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ. ‘ನನ್ನ ಮಗನ ಮೇಲೆ 2017 ರಿಂದ 2019ರ ಅವಧಿಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ’ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

‘ಈಶಾ ಹೋಂ ಸ್ಕೂಲ್‌ ನಲ್ಲಿ ಸಹಪಾಠಿಯೊಬ್ಬ ನನ್ನ ಮಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಗ ಇದನ್ನು ಹಾಸ್ಟೆಲ್‌ ವಾರ್ಡನ್‌ ಗಳ ಗಮನಕ್ಕೆ ತಂದರೂ ಏನೂ ಕ್ರಮ ಕೈಗೊಂಡಿಲ್ಲ. ‘ಇದನ್ನು ಯಾರಿಗೂ ತಿಳಿಸಬಾರದು’ ಎಂದು ಹೇಳಿದ್ದರು’ ಎಂದು ದೂರಲಾಗಿದೆ.

ಆರೋಪಿತ ವಿದ್ಯಾರ್ಥಿ ಹಾಗೂ ಹಾಸ್ಟೆಲ್‌ ವಾರ್ಡನ್ ನಿಶಾಂತ್ ಕುಮಾರ್, ಪ್ರೀತಿ ಕುಮಾರ್, ಪ್ರಕಾಶ್ ಸೋಮಯಾಜಿ ಮತ್ತು ಈಶಾ ಯೋಗ ಕೇಂದ್ರದ ಸ್ವಾಮಿ ವಿಭು ಅವರ ಹೆಸರನ್ನು ಎಫ್‌ ಐಆರ್‌ ನಲ್ಲಿ ಉಲ್ಲೇಖಿಸಲಾಗಿದೆ.

ಎಫ್‌ ಐಆರ್ ಅನ್ನು ಕೊಯಮತ್ತೂರಿನ ಪೆರೂರಿನಲ್ಲಿರುವ ಮಹಿಳಾ ಠಾಣೆಯಲ್ಲಿ ಜನವರಿ 31, 2025ರಂದು ದಾಖಲಿಸಿದ್ದು, ಪೊಲೀಸರು ಇದರ ಪ್ರತಿಯನ್ನು ಸಂತ್ರಸ್ತ ವಿದ್ಯಾರ್ಥಿಯ ತಂದೆ–ತಾಯಿಗೆ ಮಾರ್ಚ್ 28ರಂದು ನೀಡಿದ್ದಾರೆ.

‘ಕೋರ್ಟ್‌ ನಿರ್ದೇಶನ ನೀಡಿದ ನಂತರವೇ ನಮಗೆ ಎಫ್‌ ಐಆರ್ ಪ್ರತಿ ಕೊಡಲಾಯಿತು’ ಎಂದು ಸಂತ್ರಸ್ತ ವಿದ್ಯಾರ್ಥಿಯ ತಾಯಿ ತಿಳಿಸಿದರು.

ಸಂತ್ರಸ್ತ ಬಾಲಕಿ ಆಗಿದ್ದರೆ ಕ್ರಮಕೈಗೊಳ್ಳಬಹುದಿತ್ತು. ಆರೋಪಿ ಬಾಲಕ ಸಿರಿವಂತ ಕುಟುಂಬಕ್ಕೆ ಸೇರಿದ್ದು, ಏನೂ ಮಾಡಲಾಗದು ಎಂದೂ ಶಾಲಾ ಆಡಳಿತ ತಿಳಿಸಿತ್ತು. ಖಿನ್ನತೆಗೆ ಒಳಗಾಗಿದ್ದ ಮಗ ಕೋವಿಡ್ ವೇಳೆ ಆತ್ಮಹತ್ಯೆ ಮನಸ್ಥಿತಿ ಬೆಳಸಿಕೊಂಡಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version