ನವದೆಹಲಿ: ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಆಂದೋಲನವನ್ನು ಬಲಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಜನರಿಗೆ ಕರೆ ನೀಡಿದ್ದು, ಆಗಸ್ಟ್ 13 ರಿಂದ 15 ರವರೆಗೆ ತಮ್ಮ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಅಥವಾ ಪ್ರದರ್ಶಿಸಲು ಮನವಿ ಮಾಡಿದ್ದಾರೆ.
ಈ ಅಭಿಯಾನ ರಾಷ್ಟ್ರಧ್ವಜದ ಮೇಲೆ ಭಾರತೀಯರ ಸಂಬಂಧವನ್ನು ಮತ್ತಷ್ಟು ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇಂದು ಜುಲೈ 22 ದೇಶದ ಇತಿಹಾಸದಲ್ಲಿ ವಿಶೇಷ ದಿನ. 1947ರಲ್ಲಿ ಇದೇ ದಿನ ನಮ್ಮ ರಾಷ್ಟ್ರಧ್ವಜವನ್ನು ಅಳವಡಿಸಿಕೊಳ್ಳಲಾಯಿತು. ನಮ್ಮ ತ್ರಿವರ್ಣಧ್ವಜದ ಜೊತೆ ಸಹಯೋಗ ಹೊಂದಿದ ಸಮಿತಿಯ ವಿವರ, ಪಂಡಿತ್ ಜವಹರಲಾಲ್ ನೆಹರೂ ಅವರು ಅನಾವರಣಗೊಳಿಸಿದ ತ್ರಿವರ್ಣಧ್ವಜ ಹೀಗೆ ಹಲವು ಆಸಕ್ತಿಕರ ವಿಷಯಗಳಿವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.