Home ಟಾಪ್ ಸುದ್ದಿಗಳು ದಿನಬಳಕೆಯ ಸಾಮಾಗ್ರಿಗಳ ಮೇಲಿನ ಜಿಎಸ್​ಟಿ ಹಿಂಪಡೆಯಿರಿ: ವುಮೆನ್ ಇಂಡಿಯಾ ಮೂವ್ಮೆಂಟ್

ದಿನಬಳಕೆಯ ಸಾಮಾಗ್ರಿಗಳ ಮೇಲಿನ ಜಿಎಸ್​ಟಿ ಹಿಂಪಡೆಯಿರಿ: ವುಮೆನ್ ಇಂಡಿಯಾ ಮೂವ್ಮೆಂಟ್

ಹೊಸದಿಲ್ಲಿ:   ಮೋದಿ ನೇತೃತ್ವದ ಸರ್ಕಾರವು ಜನಸಾಮಾನ್ಯರ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು,  ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ನ ಬೆಲೆ ರೂ.50 ರಷ್ಟು ಏರಿಸಿ ಇದೀಗ ಪುನಃ ಐದು ಪರ್ಸೆಂಟ್ ಜಿಎಸ್ಟಿ ದಿನಬಳಕೆಯ ಆಹಾರ ವಸ್ತುಗಳ ಮೇಲೆ ವಿಧಿಸಿ ರುವುದರಿಂದ ಮಧ್ಯಮವರ್ಗದ ಜನರಿಗೆ ಬಹಳ ದೊಡ್ಡ ಹೊಡೆತವಾಗಿದೆ ಎಂದು ವುಮೆನ್ ಇಂಡಿಯಾ ಮೂವ್ಮೆಂಟ್ ಹೇಳಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಮ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಅಫ್ಶಾನ್ ಅಝೀಝ್, ಬಿಜೆಪಿ ಸರ್ಕಾರಕ್ಕೆ ಕೆಳವರ್ಗದ ಹಾಗೂ ಮಧ್ಯಮ ವರ್ಗದ ಜನರ ಜೀವನ ಇನ್ನೂ ಕಷ್ಟದಾಯಕ ವಾಗಲೆಂದೇ ಈ ತಿನಿಸುಗಳ ಮೇಲಿನ ಜಿಎಸ್‌ಟಿ ಹೆಚ್ಚಿಸಿರುವ ಉದ್ದೇಶ.  ಎರಡು ವರ್ಗದವರು ಒಂದುಕಡೆ  ಭಾರೀ  ಪ್ರಮಾಣದಲ್ಲಿ ಸಾಮಾಗ್ರಿಗಳನ್ನು ಖರೀದಿಸಲಾಗದೆ ಇನ್ನೊಂದು ಕಡೆ ಜಿಎಸ್ಟಿ ಯಿಂದಾಗಿ ಸಣ್ಣ ಪ್ರಮಾಣದಲ್ಲಿ ಟ್ಯಾಕ್ಸಿನಿಂದಾಗಿ ಖರೀದಿಸಲಾಗದೆ ಪರದಾಡಬೇಕಾಗಿ ಬರುತ್ತದೆ. ಇದರ  ಅರ್ಥ ಏನೆಂದರೆ 25 ಕೆಜಿಗಿಂತ ಹೆಚ್ಚು ಸಾಮಗ್ರಿ ಗಳನ್ನು ಉದಾಹರಣೆ ಸಜ್ಜಿಗೆ  ಅಕ್ಕಿ, ಗೋಧಿ ಹಿಟ್ಟು, ಮೊಸರು, ಪನೀರ್ ಇತ್ಯಾದಿ ಖರೀದಿಸಲು ಸಾಮರ್ಥ್ಯವಿರುವವರು ಅದೇ ವೆಚ್ಚದಲ್ಲಿ ಖರೀದಿಸಬಹುದು. ಆದರೆ ಯಾರಿಗೆ ಹೆಚ್ಚು ಪ್ರಮಾಣದಲ್ಲಿ ಖರೀದಿಸಲು ಸಾಧ್ಯವಿಲ್ಲವೋ ಅವರು 5% ಜಿಎಸ್‌ಟಿ ಕೊಟ್ಟು ಅಗತ್ಯವಿರುವ ವಸ್ತುಗಳನ್ನು ಪಡೆಯಬೇಕೆಂಬುದಾಗಿದೆ  ಇದರ ಹಿಂದಿರುವ  ಉದ್ದೇಶ ಎಂದು ಹೇಳಿದರು.

ಮಾನ್ಯ ಮಂತ್ರಿಯವರು  ಹೇಳುವುದೇನೆಂದರೆ ಈ ನೀತಿಯು ಉತ್ಪಾದನೆ ಹಾಗೂ ಪೂರೈಕೆಯ ಕೊರತೆ ಯನ್ನು ಕಡಿಮೆಗೊಳಿಸಲಾಗಿರುತ್ತದೆ.  ಸರಕಾರರದ ಜನ ವಿರೋಧಿ ನೀತಿಯಂತೆಯೇ ಇದು ಬಡಜನರ ದಮನಿಸುವ ಒಂದು ಪ್ರಯೋಗವಾಗಿದೆ. ಮೋದಿ ಸರ್ಕಾರ ಭಾರತದ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ದುಡಿಯುವ ಬದಲು ತನ್ನ ಯಾವುದೇ ಒಂದು ಆಧಾರ ಹಾಗೂ ಯೋಚನೆ ಇಲ್ಲದೆ ಜನರನ್ನು ಲೂಟಿ ಮಾಡುವ ವಂತಹ ನೀತಿಗಳನ್ನು ಜಾರಿಗೆ ತರುತ್ತಿದೆ. ಈ ಸರ್ಕಾರ ಅಧಿಕಾರಕ್ಕೆ ಕ್ಕೆ ಬಂದ ದಿನದಿಂದ ಸಾಮಾನ್ಯ ಜನರ ಹೊಟ್ಟೆಗೆ ಹೊಡೆಯುವ ಕೆಲಸವನ್ನು ನಿರ್ವಹಿಸುತ್ತಿದೆ ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾನ್ಯ ಜನರ ನೋವನ್ನು  ಅರ್ಥೈಸಿಕೊಂಡು, ಅವರ ಕಷ್ಟವನ್ನು ಅರಿತುಕೊಂಡು ಸರ್ಕಾರವು ಕೈಗೊಂಡಂತಹ  ತಿನಿಸುಗಳ ಮೇಲಿನ ಜಿಎಸ್ಟಿಯನ್ನು ಕೂಡಲೇ ಹಿಂಪಡೆಯಬೇಕು ಮತ್ತು ಬಡ ಜನರಿಗೆ ಹಸಿವಿನಿಂದ ಬಳಲುವ ಬಡ ಕುಟುಂಬಕ್ಕೆ ನೆರವಾಗಬೇಕೆಂದುದು  ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹಿಸುತ್ತದೆ. ಸರ್ಕಾರವು ಈ ನೀತಿಯನ್ನು ಹಿಂಪಡೆಯುವವರೆಗೆ ವಿಮ್   ರಾಷ್ಟ್ರಾದ್ಯಂತ ಪ್ರತಿಭಟನೆಯನ್ನು ನಡೆಸುತ್ತದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.

Join Whatsapp
Exit mobile version