Home ಟಾಪ್ ಸುದ್ದಿಗಳು ನಾಳೆ ಮಂಡ್ಯಕ್ಕೆ ಪ್ರಧಾನಿ ಮೋದಿ ಭೇಟಿ | ಸ್ವಾಗತ ಫ್ಲೆಕ್ಸ್’ನಲ್ಲಿ ವಿವಾದಿತ ‘ಉರಿಗೌಡ – ನಂಜೇಗೌಡ’...

ನಾಳೆ ಮಂಡ್ಯಕ್ಕೆ ಪ್ರಧಾನಿ ಮೋದಿ ಭೇಟಿ | ಸ್ವಾಗತ ಫ್ಲೆಕ್ಸ್’ನಲ್ಲಿ ವಿವಾದಿತ ‘ಉರಿಗೌಡ – ನಂಜೇಗೌಡ’ ಪ್ರತ್ಯಕ್ಷ: ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ

ಮಂಡ್ಯ: ನಾಳೆ ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದು, ಸ್ವಾಗತ ದ್ವಾರದ ಫ್ಲೆಕ್ಸ್’ನಲ್ಲಿ ವಿವಾದಿತ ಉರಿಗೌಡ ಹಾಗೂ ನಂಜೇಗೌಡ ಹೆಸರು ಹಾಕಲಾಗಿದೆ.


ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಕೂಡಲೇ ಫ್ಲೆಕ್ಸ್ ತೆರವುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ.


ನಾಳೆ ಪ್ರಧಾನಿ ಮೋದಿ ಅವರು ಮಂಡ್ಯದ ಗೆಜ್ಜಲಗೆರೆಯಲ್ಲಿ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇ ಅನ್ನು ಉದ್ಘಾಟಿಸಲಿದ್ದು, ಬೃಹತ್ ರೋಡ್ ಶೋ ನಡೆಯಲಿದೆ. ಬಿಜೆಪಿ ಕಾರ್ಯಕರ್ತರು ಸ್ವಾಗತ ದ್ವಾರದ ಫ್ಲೆಕ್ಸ್’ಗೆ ‘ಉರಿಗೌಡ ಮತ್ತು ನಂಜೇಗೌಡ’ ಹೆಸರನ್ನು ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ.


2017ರಂದು ಕೃತಕವಾಗಿ, ದುರುದ್ದೇಶದಿಂದ ಸೃಷ್ಟಿಸಿದ ಪಾತ್ರಗಳಿಂದ ಸ್ವಾಗತ ಕೋರುವುದರಿಂದ ಪ್ರಧಾನಿ ಮೋದಿಗೆ ಮುಜುಗರವಾಗುವುದಿಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ.

Join Whatsapp
Exit mobile version