Home ಟಾಪ್ ಸುದ್ದಿಗಳು ದೇಶದ ಆರ್ಥಿಕತೆ ಹಾಳುಗೆಡವಿದ ಮೋದಿ: ರಾಹುಲ್ ಟೀಕಾಪ್ರಹಾರ

ದೇಶದ ಆರ್ಥಿಕತೆ ಹಾಳುಗೆಡವಿದ ಮೋದಿ: ರಾಹುಲ್ ಟೀಕಾಪ್ರಹಾರ

ನವದೆಹಲಿ: ಜಗತ್ತಿನ ಅತಿ ವೇಗವಾಗಿ ಬೆಳೆಯುತ್ತಿದ್ದ ಆರ್ಥಿಕತೆಯಾಗಿದ್ದ ಭಾರತದ ಆಡಳಿತವು ಪ್ರಧಾನಿ ಮೋದಿಯವರ ಕೈಗೆ ಹೋದ ಎಂಟು ವರುಷಗಳಲ್ಲಿ ಅವೆಲ್ಲ ನಿಷ್ಫಲ ಎಂಬಂತಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಸದ್ಯದ ಆಡಳಿತ ವೈಫಲ್ಯ, ವಿದ್ಯುತ್ ಸಮಸ್ಯೆ, ನಿರುದ್ಯೋಗ, ಹಣದುಬ್ಬರ, ರೈತರ ಸಮಸ್ಯೆ ಎಲ್ಲದರಲ್ಲೂ ಮೋದಿಯವರದು ದುರಾಡಳಿತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.


ಮನಮೋಹನಸಿಂಗ್ ಲೋಕದ ವೇಗವಾಗಿ ಬೆಳೆಯುವ ಆರ್ಥಿಕತೆ ಎಂದು ಮಾಡಿದ್ದುದನ್ನು ಮೋದಿಯವರು ಹಾಳು ಮಾಡಿದ್ದಾರೆ. “ಯಾವ ರೀತಿ ವೇಗದ ಆರ್ಥಿಕತೆಯನ್ನು ಹಾಳು ಮಾಡಬಹುದು ಎನ್ನುವುದಕ್ಕೆ ಮೋದಿಯವರ ಎಂಟು ವರುಷಗಳ ಆಡಳಿತವೇ ಉದಾಹರಣೆ” ಎಂದು ಅವರು ಕುಟುಕಿದರು. ಎರಡು ದಿನಗಳ ಹಿಂದೆ ಹಿರಿಯ ನಾಯಕ ಪಿ. ಚಿದಂಬರಂ ಸಹ ಮೋದಿಯವರ ಆರ್ಥಿಕ ನಿರ್ವಹಣೆಯನ್ನು ಟೀಕಿಸಿದ್ದರು. ಕಲ್ಲಿದ್ದಲು ಕೊರತೆ, ಕಲ್ಲಿದ್ದಲು ಸಾಗಿಸಲು, ಜನ ಸಾಗಣೆ ರೈಲುಗಳ ನಿಲುಗಡೆ. ಇದು ಮೋದಿಯವರ ಆಡಳಿತದ ಪರಿಹಾರ ಮಾರ್ಗಗಳು ಎಂದು ಚಿದಂಬರಂ ಟೀಕೆ ಮಾಡಿದ್ದಾರೆ.


“ದೇಶದಲ್ಲೇ ಬೇಕಾದಷ್ಟು ಕಲ್ಲಿದ್ದಲು ಸಂಪತ್ತು, ತುಂಬ ವಿಸ್ತಾರವಾದ ರೈಲು ಸಂಪರ್ಕ ವ್ಯವಸ್ಥೆ, ಶಾಖೋತ್ಪನ್ನ ಕೇಂದ್ರಗಳ ಸಾಮರ್ಥ್ಯಗಳ ಬಳಕೆ ಪೂರ್ಣ ಮಾಡದಿರುವುದು. ಇವೆಲ್ಲದರ ನಡುವೆ ವಿದ್ಯುತ್ ಕೊರತೆ. ಹಿಂದೆ 60 ವರುಷದಿಂದ ಕಾಂಗ್ರೆಸ್ ಆಳಿದ್ದರಿಂದ ಇದು ಆಯಿತೆ? ಮೋದಿ ಸರಕಾರವನ್ನು ಟೀಕಿಸುವುದು ಬೇಡವೇ” ಎಂದು ಚಿದಂಬರಂ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಸಿಎಂಐಇ- ಭಾರತೀಯ ಹಣಕಾಸು ಗಮನಿಸುವ ಕೇಂದ್ರದ ಅಂಕಿ ಅಂಶದಂತೆ 2016ರಲ್ಲಿ 47%ಕ್ಕೆ ಇಳಿದಿದ್ದ ಎಲ್ಎಫ್ ಪಿಆರ್- ಕಾರ್ಮಿಕ ಬಲ ಭಾಗವಹಿಸುವಿಕೆಯ ದರವು ಭಾರತದಲ್ಲಿ 40%ಕ್ಕೆ ಇಳಿದಿದೆ. ಅಂದರೆ 15 ವರುಷ ದಾಟಿದ ಭಾರತದ ಅರ್ಧಕ್ಕರ್ಧ ಜನರು ಉದ್ಯೋಗ ಅವಕಾಶದಿಂದ ಹೊರಗೆ ಇದ್ದಾರೆ. ಅಷ್ಟೇ ಅಲ್ಲ ಈ ಕೆಲಸಹೀನತೆಯ ಪ್ರಮಾಣವು ಹೆಚ್ಚಾಗುತ್ತಲಿದೆ ಎಂದು ಹೇಳಿದ್ದಾರೆ.

Join Whatsapp
Exit mobile version