ಚಂದೌಲಿ: ಪೊಲೀಸರಿಂದ ಹಲ್ಲೆಗೊಳಗಾದ ಯುವತಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಮನ್ರಾಜ್ಪುರ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ನಿಶಾ ಯಾದವ್ (21) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.
ಈ ಘಟನೆಯು ಹಿಂಸಾತ್ಮಕ ರೂಪ ಪಡೆದಿದ್ದು, ಗ್ರಾಮಸ್ಥರ ಪ್ರತಿಭಟನೆ ವೇಳೆ ಆಂಬ್ಯುಲೆನ್ಸ್ ಗೆ ಹಾನಿ ಮಾಡಿ ರಾಷ್ಟ್ರೀಯ ಹೆದ್ದಾರಿ -2 ಅನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ಲಾಠಿ ಚಾರ್ಜ್ ನಡೆಯಿತು.
ಪ್ರಕರಣವೊಂದರ ಆರೋಪಿ ಕನ್ಹಯ್ಯಾ ಪತ್ತೆಯಾಗದೆ ಇದ್ದಾಗ ಪೊಲೀಸರು ಅವನ ಸಹೋದರನನ್ನು ತಮ್ಮೊಂದಿಗೆ ಕರೆದೊಯ್ಯಲು ಪ್ರಯತ್ನಿಸಿದರು. ಈ ವೇಳೆ ನಿಶಾ ವಿರೋಧಿಸಿದಾಗ ಪೊಲೀಸರು ಆಕೆಗೆ ಥಳಿಸಿದ್ದು, ಬಳಿಕ ಸಾವನ್ನಪ್ಪಿದಳು ಎಂದು ಆರೋಪಿಸಲಾಗಿದೆ.