ಮುಂಬೈ: ಹಿಂದುತ್ವವನ್ನು ಪ್ರಚಾರ ಮಾಡುವ ಮೈತ್ರಿಯ ನೆಪದಲ್ಲಿ ಬಿಜೆಪಿಯು ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರಿಗೆ ಮೋಸ ಮಾಡಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಾಳಾಸಾಹೇಬರಿಗೆ ಮುಗ್ಧತೆ ಇತ್ತು. ಆದರೆ, ನಾನು ಹಾಗಲ್ಲ. ಬಿಜೆಪಿ ತನ್ನ ಸಂಚಿನಲ್ಲಿ ಯಶಸ್ವಿಯಾಗಲು ನಾನು ಬಿಡುವುದಿಲ್ಲ. ನಾನು ಅವರ ಕಾರ್ಯಗಳು ಮತ್ತು ಕಾರ್ಯತಂತ್ರಗಳ ಮೇಲೆ ನನ್ನ ಕಣ್ಣಿಟ್ಟಿರುತ್ತೇನೆ ಮತ್ತು ಕಿವಿಗಳನ್ನು ತೆರೆದಿದ್ದೇನೆ. ಬಿಜೆಪಿಯ ಕಾರ್ಯಸೂಚಿಯನ್ನು ಚೆನ್ನಾಗಿ ತಿಳಿದಿದ್ದೇನೆ ಎಂದು ಹೇಳಿದ್ದಾರೆ.