ಚಿಕ್ಕಮಗಳೂರು: ಸಿದ್ದರಾಮಯ್ಯ ಬರ್ತ್ ಡೇ ಸ್ಪೆಷಲ್; 75 ಕೆ.ಜಿ.ತೂಕದ ಕೇಕ್ ಕತ್ತರಿಸಿದ ಅಭಿಮಾನಿಗಳು

Prasthutha|

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75 ನೇ ಹುಟ್ಟುಹಬ್ಬ ಇಂದು ದಾವಣಗೆರೆಯಲ್ಲಿ ಅದ್ದೂರಿಯಾಗಿ ನಡೆಯಲಿದ್ದು, ಇದರ ಅಂಗವಾಗಿ ಮಂಗಳವಾರ  ಸಿದ್ದು ಅಭಿಮಾನಿಗಳು 75 ಕೆ.ಜಿ.ತೂಕದ ಕೇಕ್ ಕತ್ತರಿಸಿ ಹುಟ್ಟುಹಬ್ಬಕ್ಕೆಶುಭ ಕೋರಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿ ನಡೆದಿದೆ.

- Advertisement -

ತರೀಕೆರೆ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ ಗೋಪಿಕುಮಾರ್ ರಾಷ್ಟ್ರೀಯ ಹೆದ್ದಾರಿ 206 ರ ಗಾಂಧಿ ವೃತ್ತದಲ್ಲಿ 75 ಕೆ.ಜಿ. ತೂಕದ ಕೇಕ್ ಕತ್ತರಿಸಿ ಸಿದ್ದುಗೆ ಶುಭಕೋರಿದ್ದಾರೆ.

ಸಿದ್ದು ಹುಟ್ಟುಹಬ್ಬದ ಅಂಗವಾಗಿ ತರೀಕೆರೆ ಪಟ್ಟಣದ ಪಟ್ಟಣ ಪಂಚಾಯಿತಿಯ 23 ಜನ ಸದಸ್ಯರಿಗೂ ಪಕ್ಷಾತೀತವಾಗಿ ಸನ್ಮಾನಿಸಿದ್ದಾರೆ. ಜೊತೆಗೆ ಇಂದು ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೂ ಗೋಪಿಕುಮಾರ್ ಸಾವಿರಕ್ಕೂ ಅಧಿಕ ಜನರನ್ನ ದಾವಣಗೆರೆಗೆ ಕರೆದೊಯ್ಯುತ್ತಿದ್ದಾರೆ.

- Advertisement -

ಈಗಾಗಲೇ ಎರಡು ಬಸ್ ಹಾಗೂ ಎರಡು ಟಿಟಿ ವಾಹನಗಳಲ್ಲಿ ಸಿದ್ದು ಅಭಿಮಾನಿಗಳು ತುಂಬಿದ್ದು  ಮತ್ತಷ್ಟು ಜನ ತಮ್ಮ ಸ್ವಂತ ವಾಹನದಲ್ಲಿ ದಾವಣಗೆರೆಗೆ ತೆರಳಲಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ಉಮರ್ ಫಾರೂಕ್, ಮಿರ್ಜಾ ಇಸ್ಮಾಯಿಲ್, ಧರ್ಮರಾಜ್, ಪ್ರಕಾಶ್ ವರ್ಮಾ ಸೇರಿದಂತೆ 250ಕ್ಕೂ ಅಧಿಕ ಜನ ರಸ್ತೆ ಮಧ್ಯೆ ಜಮಾಯಿಸಿ ಸಿದ್ದು ಹುಟ್ಟುಹಬ್ಬ ಆಚರಿಸಿದ್ದಾರೆ. ಇದೇ ವೇಳೆ, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವೇ ಎಂದು ಘೋಷಣೆ ಕೂಗಿದ್ದಾರೆ.

Join Whatsapp
Exit mobile version