Home ಕರಾವಳಿ ಫೆ.17 | ಉಳ್ಳಾಲದಲ್ಲಿ PFI ‘ಯೂನಿಟಿ ಮಾರ್ಚ್’, ಸಾರ್ವಜನಿಕ ಸಭೆ

ಫೆ.17 | ಉಳ್ಳಾಲದಲ್ಲಿ PFI ‘ಯೂನಿಟಿ ಮಾರ್ಚ್’, ಸಾರ್ವಜನಿಕ ಸಭೆ

ಉಳ್ಳಾಲ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ‘ದೇಶಕ್ಕಾಗಿ ಪಾಪ್ಯುಲರ್ ಫ್ರಂಟ್ ಜೊತೆಗೆ’ ಘೋಷಣೆಯಡಿ ನಾಳೆ (ಫೆ.17) ಉಳ್ಳಾಲದಲ್ಲಿ ‘ಯೂನಿಟಿ ಮಾರ್ಚ್’ ಹಾಗೂ ಸಾರ್ವಜನಿಕ ಸಭೆ ನಡೆಯಲಿದೆ.

ಮಧ್ಯಾಹ್ನ 2 ಗಂಟೆಗೆ ಯೂನಿಟಿ ಮಾರ್ಚ್ ಆರಂಭವಾಗಲಿದ್ದು, ಒಂಬತ್ತು ಕೆರೆಯ ಅನಿಲ ಕಂಪೌಂಡ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಅಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕೇರಳದ ಅಪ್ಝಲ್ ಖಾಸಿಮಿ ಕೊಲ್ಲಂ, ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಉಡುಪಿ ಜಿಲ್ಲಾ ಕ್ರೈಸ್ತ ಧರ್ಮಗುರುಗಳಾದ ರೆ.ಫಾ. ವಿಲಿಯಂ ಮಾರ್ಟಿಸ್, ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಆನಂದ ಮಿತ್ತಬೈಲು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.

Join Whatsapp
Exit mobile version