ಮಡಿಕೇರಿ: ತ್ರಿಪುರಾದಲ್ಲಿ ನಡೆಯುತ್ತಿರುವ ಮುಸ್ಲಿಮರ ಮೇಲೆ ದೌರ್ಜನ್ಯದ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇಂದು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ಹಿಂಸಾಚಾರ ನಿಲ್ಲಿಸಿ, ಅಪರಾಧಿಗಳನ್ನು ಬಂಧಿಸಿ ಘೋಷಣೆಗಳೊಂದಿಗೆ ನಗರದ ಇಂದಿರಾಗಾಂಧಿ ವೃತ್ತದ ಬಳಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ ನಡೆಸಿತು.
ಸರಕಾರಿ ಪ್ರೇರಿತವಾಗಿ ಮುಸ್ಲಿಮರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಪ್ರತಿಭಟನಾಕಾರರು ಈ ಸಂದರ್ಭ ಆರೋಪಿಸಿದರು. ತ್ರಿಪುರಾದ ಮುಸಲ್ಮಾನರನ್ನು ರಕ್ಷಿಸಿ, ಹಿಂಸಾಚಾರ ನಡೆಸಿದವರನ್ನು ಈ ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ಪ್ರತಿಭಟನಾ ಸಭೆಯಲ್ಲಿ ಪಿಎಫ್ ಐ ಮುಖಂಡರಾದ ಅಮೀನ್ ಮೊಹಿಸಿನ್, ಅಬ್ದುಲ್ ಅಡ್ಕಾರ್, ನೂರುದ್ದೀನ್ ಮತ್ತಿತರರು ಪಾಲ್ಗೊಂಡಿದ್ದರು.