Home ಟಾಪ್ ಸುದ್ದಿಗಳು ಕೇರಳದಲ್ಲಿ ಕ್ಯಾಂಪಸ್ ಫ್ರಂಟ್ ರಾಜಭವನ ರ‍್ಯಾಲಿ| ಉತ್ತರಪ್ರದೇಶದಲ್ಲಿ ಪ್ರಕರಣ ದಾಖಲಿಸಿದ ಆದಿತ್ಯನಾಥ್ ಪೊಲೀಸರು!

ಕೇರಳದಲ್ಲಿ ಕ್ಯಾಂಪಸ್ ಫ್ರಂಟ್ ರಾಜಭವನ ರ‍್ಯಾಲಿ| ಉತ್ತರಪ್ರದೇಶದಲ್ಲಿ ಪ್ರಕರಣ ದಾಖಲಿಸಿದ ಆದಿತ್ಯನಾಥ್ ಪೊಲೀಸರು!

ತಿರುವನಂತಪುರಂ: ಕ್ಯಾಂಪಸ್ ಫ್ರಂಟ್ ನಾಯಕ ರವೂಫ್ ಷರೀಫ್ ಮತ್ತು ಇತರರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಿರುವನಂತಪುರಂ ರಾಜಭವನಕ್ಕೆ CFI ನಡೆಸಿದ ರ್ಯಾಲಿ ವಿರುದ್ಧ ಉತ್ತರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವೇಷಧಾರಿ ವ್ಯಕ್ತಿಯೊಬ್ಬನನ್ನು ಎಳೆದೊಯ್ಯುತ್ತಾ ಹಲ್ಲೆ ನಡೆಸುವ ವಿನೂತನ ಪ್ರತಿಭಟನೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನೆಯ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಲಕ್ನೋದ ಇಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಲಕ್ನೋ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೀಡಿಯೋ ವೀಕ್ಷಿಸಿ….

https://twitter.com/_TheBite/status/1452813864723116032

ಕೋಮು ವೈಷಮ್ಯ ಸೃಷ್ಟಿಸಲು ಯತ್ನ ಸೇರಿದಂತೆ ವಿವಿಧ ಪ್ರಕರಣ ದಾಖಲಾಗಿದೆ. ಕ್ಯಾಂಪಸ್ ಫ್ರಂಟ್ ಮಾರ್ಚ್ ಬಗ್ಗೆ ಆರೆಸ್ಸೆಸ್ ಪರ ಮಾಧ್ಯಮಗಳು ಟೀಕಿಸಿದ್ದವು.
ಕೇರಳದಲ್ಲಿ ಘಟನೆ ನಡೆದಿರುವುದರಿಂದ ಉತ್ತರಪ್ರದೇಶ ಪೊಲೀಸರಿಗೆ ನೇರವಾಗಿ ಪ್ರಕರಣ ದಾಖಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೋಮು ವೈಷಮ್ಯ ಸೃಷ್ಟಿಸಲು ಯತ್ನಿಸಿದ ಆರೋಪದ ಮೇಲೆ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp
Exit mobile version