Home ಟಾಪ್ ಸುದ್ದಿಗಳು ವಾಹನ ಸವಾರರಿಗೆ ಮತ್ತೆ ಸಂಕಷ್ಟ: ಪೆಟ್ರೋಲ್-ಡೀಸೆಲ್ ಬೆಲೆ 150 ರೂ.ವರೆಗೆ ಏರಿಕೆ ಸಾಧ್ಯತೆ !

ವಾಹನ ಸವಾರರಿಗೆ ಮತ್ತೆ ಸಂಕಷ್ಟ: ಪೆಟ್ರೋಲ್-ಡೀಸೆಲ್ ಬೆಲೆ 150 ರೂ.ವರೆಗೆ ಏರಿಕೆ ಸಾಧ್ಯತೆ !

►ಸಿಲಿಂಡರ್ ಗೆ 1000 ರೂ. ಪಕ್ಕಾ..!

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನೇ ದಿನೇ ಗಗನದತ್ತ ಏರುತ್ತಲೇ ಇದೆ. ಇದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ದೇಶದಲ್ಲಿ ಮುಂಬರುವ ದಿನಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ ಗೆ 150 ರೂ. ಹಾಗೂ ಸಿಲಿಂಡರ್ ಗೆ 1000 ರೂ. ತಲುಪಲಿದೆ ಎಂದು ಹೇಳಿದೆ.


ಮುಂದಿನ ವರ್ಷದ ವೇಳೆಗೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ ಗೆ $ 110 ಕ್ಕೆ ಏರಬಹುದು ಎಂದು ಗೋಲ್ಡ್‌ ಮನ್ ಸ್ಯಾಚ್ಸ್ ಇತ್ತೀಚಿನ ಟಿಪ್ಪಣಿಯಲ್ಲಿ ಹೇಳಿದೆ. ಪ್ರಸ್ತುತ, ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ ಗೆ $ 85 ರಷ್ಟಿದೆ. ಹೀಗಾಗಿ, ಬ್ರೆಂಟ್ ಕಚ್ಚಾ ತೈಲದ ಬೆಲೆಗಳು ಈಗಿನ ಬೆಲೆಗೆ ಹೋಲಿಸಿದರೆ ಮುಂದಿನ ವರ್ಷದ ವೇಳೆಗೆ ಶೇ.30 ರಷ್ಟು ಹೆಚ್ಚಾಗಬಹುದು. ಜಾಗತಿಕ ಬೇಡಿಕೆ-ಪೂರೈಕೆಯು ಅಸಮತೋಲನಗೊಂಡಿದೆ ಎಂದು ಗೋಲ್ಡ್‌ ಮನ್ ಸ್ಯಾಚ್ಸ್ ತೈಲ ವಿಶ್ಲೇಷಕರು ಹೇಳುತ್ತಾರೆ. ಈ ಸಮಯದಲ್ಲಿ ಕಚ್ಚಾ ಬೇಡಿಕೆಯು ಕೋವಿಡ್ ಪೂರ್ವದ ಮಟ್ಟವನ್ನು ತಲುಪಿದೆ. ಇದರಿಂದ ಮುಂದಿನ ವರ್ಷ ಕಚ್ಚಾತೈಲ ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.

Join Whatsapp
Exit mobile version