Home Uncategorized ಕೃಷಿ ಇಲಾಖೆಯ 672 ಹುದ್ದೆಗಳ ಭರ್ತಿಗೆ KPSC ಅರ್ಜಿ ಆಹ್ವಾನ

ಕೃಷಿ ಇಲಾಖೆಯ 672 ಹುದ್ದೆಗಳ ಭರ್ತಿಗೆ KPSC ಅರ್ಜಿ ಆಹ್ವಾನ

ಬೆಂಗಳೂರು: ಕೃಷಿ ಇಲಾಖೆಯಲ್ಲಿ ಖಾಲಿ ಇರುವ ‘ಗ್ರೂಪ್– ಬಿ’ ವೃಂದದ 672 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಆನ್ ಲೈನ್ ಅರ್ಜಿ ಆಹ್ವಾನಿಸಿದೆ.


‘ಕೃಷಿ ಅಧಿಕಾರಿ’ ಎಂಬ 86 ಹುದ್ದೆಗಳು ಹಾಗೂ ‘ಸಹಾಯಕ ಕೃಷಿ ಅಧಿಕಾರಿ’ ಎಂಬ 586 ಹುದ್ದೆಗಳಿವೆ.


ಅಕ್ಟೋಬರ್ 7ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು ನವೆಂಬರ್ 7 ಅರ್ಜಿ ಸಲ್ಲಿಸಲು ಕಡೆಯ ದಿನ.


ಕೃಷಿ ಅಧಿಕಾರಿ ಹುದ್ದೆಗೆ ಬಿ.ಎಸ್ಸಿ ಕೃಷಿ ಅಥವಾ ಬಿ.ಎಸ್ಸಿ (ಆನರ್ಸ್) ಕೃಷಿ ಪದವಿ ಪಾಸಾಗಿರಬೇಕು. ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ಬಿ.ಎಸ್ಸಿ ಅಗ್ರಿ ಸೇರಿದಂತೆ 9 ಬಗೆಯ ಕೃಷಿ ಸಂಬಂಧಿ ವಿಷಯದಲ್ಲಿ ಯಾವುದಾದರೂ ಒಂದು ಪದವಿ ಪಾಸಾಗಿರಬೇಕು.


ಶುಲ್ಕ ಸಾಮಾನ್ಯ ವರ್ಗದವರಿಗೆ ₹600. 2ಎ, 2ಬಿ, 3ಎ, 3ಬಿ ಅವರಿಗೆ 300. ಎಸ್ಸಿ, ಎಸ್ಟಿ, ಪ್ರವರ್ಗ 1, ಮಾಜಿ ಸೈನಿಕರಿಗೆ ವಿನಾಯಿತಿ ಇದೆ.
ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಆಯೋಗದ https://kpsc.kar.nic.in/ ಪರಿಶೀಲಿಸಬೇಕು.

Join Whatsapp
Exit mobile version