Home ಟಾಪ್ ಸುದ್ದಿಗಳು 2019ರ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೆಗಾಸೆಸ್ ಸ್ಪೈವೇರ್!

2019ರ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೆಗಾಸೆಸ್ ಸ್ಪೈವೇರ್!

ಹೊಸದಿಲ್ಲಿ: 2019 ರ ಜುಲೈನಲ್ಲಿ ಕರ್ನಾಟಕದ ಮೈತ್ರಿ ಸರ್ಕಾರವನ್ನು ಉರುಳಿಸಲು ಪ್ರತಿಪಕ್ಷಗಳು ಯೋಜನೆ ರೂಪಿಸಿರುವುದು ಪೆಗಾಸೆಸ್ ಸ್ಪೈವೇರ್ ನಿಂದ ಸೋರಿಕೆಯಾಗಿರುವ ಮಾಹಿತಿ ದಟ್ಟವಾಗತೊಡಗಿದೆ. ಅಂದಿನ ಉಪಮುಖ್ಯಮಂತ್ರಿಯಾಗಿದ್ದ ಜಿ.ಪರಮೇಶ್ವರ ಮತ್ತು ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರ ಕಾರ್ಯದರ್ಶಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ದೂರವಾಣಿ ಸಂಖ್ಯೆಗಳನ್ನು ಇಸ್ರೇಲ್ ಎನ್.ಎಸ್.ಒ ಕಂಪೆನಿ ಗುರಿಯಾಗಿಸಿ ಅದರಲ್ಲಿದ್ದ ದಾಖಲೆಗಳನ್ನು ಸೋರಿಕೆ ಮಾಡಿದೆ ಎಂಬ ಮಾಹಿತಿ ಮಾಧ್ಯಮಕ್ಕೆ ಲಭಿಸತೊಡಗಿದೆ. 

ಈ ಮೇಲಿನ ಸಂಖ್ಯೆಗಳು ಸೋರಿಕೆಯಾದ ಡೇಟಾಬೇಸ್ ನ ಭಾಗ ಮತ್ತು ಅಂತಾರಾಷ್ಟ್ರೀಯ ಮಾಧ್ಯಮದೊಂದಿಗೆ ಈ ಡೇಟಾಬೇಸ್ ಅನ್ನು ಹಂಚಿಕೊಳ್ಳುವುದು ಪೆಗಾಸೆಸ್ ಪ್ರಾಜೆಕ್ಟ್ ನ ಭಾಗವಾಗಿದೆಯೆಂದು ಫ್ರೆಂಚ್ ಮಾಧ್ಯಮವೊಂದು ವರದಿ ಮಾಡಿದೆ. ಇಸ್ರೇಲ್ ಮೂಲಕ ಎನ್.ಎಸ್.ಒ. ತನ್ನ ಪೆಗಾಸಸ್ ಸ್ಪೈವೇರ್ ಅನ್ನು ಮಾರಾಟ ಮಾಡುತ್ತಿದೆ. ಪೆಗಾಸೆಸ್ ಸ್ಪೈವೇರ್ ಮೂಲಕ ಸ್ಮಾರ್ಟ್ ಪೋನ್ ಗಳ ಹ್ಯಾಕಿಂಗ್ ಪ್ರಕ್ರಿಯೆ ಸರ್ಕಾರ ಹೊರತುಪಡಿಸಿ ಭಾರತೀಯ ಕಾನೂನಿನ್ವಯ ಅಪರಾಧವಾಗಿದೆ. ಭಾರತ ತನ್ನ ಗ್ರಾಹಕವಲ್ಲವೆಂದು ಇಸ್ರೇಲ್ ಕಂಪೆನಿ ಎನ್.ಎಸ್.ಒ. ಮತ್ತು ಮೋದಿ ಸರ್ಕಾರ ತಳ್ಳಿಹಾಕಿಲ್ಲ.

ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಮೈತ್ರಿ ಸರ್ಕಾರ ಮತ್ತು ಬಿಜೆಪಿ ಪಕ್ಷದ ನಡುವೆ ರಾಜಕೀಯ ತಿಕ್ಕಾಟ ಏರ್ಪಟ್ಟ ಸಮಯದಲ್ಲಿ ಅಂದಿನ ಕೆಲವು ಪ್ರಮುಖ ರಾಜಕೀಯ ಮುಖಂಡರ ಫೋನ್ ಗಳನ್ನು ಅಯ್ಕೆಮಾಡಿ ಕದ್ದಾಲಿಕೆ ಮಾಡಲಾಗಿತ್ತೆಂದು ದಾಖಲೆಗಳು ಸೂಚಿಸುತ್ತದೆ. 2019 ರಲ್ಲಿ ಆಡಳಿತ ಪಕ್ಷದ 17 ಶಾಸಕರು ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ವೇಳೆ ಹಠಾತ್ತನೆ ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರ ಪತನವಾಗಿತ್ತು

ಮಾತ್ರವಲ್ಲದೇ 2018 ರಿಂದಲೇ ರಾಹುಲ್ ಗಾಂಧಿಯವರ ಹೊಸ ಮೊಬೈಲ್ ಸಂಖ್ಯೆಯನ್ನು ನಿಗಾವಹಿಸಲು ಪೆಗಾಸೆಸ್ ಸ್ಪೈವೇರ್ ಪಟ್ಟಿಗೆ ಸೇರಿಸಲಾಗಿತ್ತು. ಮೈತ್ರಿ ಸರ್ಕಾರ – ಬಿಜೆಪಿ ನಡುವೆ ಏರ್ಪಟ್ಟಿದ್ದ ರಾಜಕೀಯ ತಿಕ್ಕಾಟದ ಸಮಯದಲ್ಲಿ ಆಯ್ದ ವ್ಯಕ್ತಿಗಳ ಮೊಬೈಲ್ ಸಂಖ್ಯೆಯನ್ನು ಸತತವಾದ ಹ್ಯಾಕ್ ಮಾಡಿ ಮಾಹಿತಿ ಕದ್ದಿರುವುದೇ ಸರ್ಕಾರ ಪತನವಾಗಲು ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. 

ಆಪರೇಷನ್ ಕಮಲದ ಮೂಲಕ ಕುದುರೆ ವ್ಯಾಪಾರಕ್ಕಿಳಿದ ಶಾಸಕರು ಈ ಆರೋಪಗಳನ್ನು ನಿರಾಕರಿಸಿದ್ದರೂ ಅನರ್ಹ 17 ಶಾಸಕರು ಬಿಜೆಪಿ ಪಾಳಯದಲ್ಲಿ ಗುರುತಿಸಿದ್ದರು. ಸೋರಿಕೆಯಾದ ಅಂಶಗಳನ್ನು ಪರಿಶೀಲಿಸಿದಾಗ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಾರ್ಯದರ್ಶಿಗೆ ಸೇರಿದ ಈ ಎರಡು ಫೋನ್ ಅನ್ನು ಗುರಿಯಾಗಿಸಿ ಕದ್ದಾಲಿಕೆ ನಡೆಸಲಾಗಿತ್ತೆಂದು ಬಹಿರಂಗವಾಗುತ್ತಿದೆ. 2019 ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. 17 ಶಾಸಕರ ಅನರ್ಹದೊಂದಿಗೆ ಯಡಿಯೂರಪ್ಪ ನವರ ಸರ್ಕಾರ ಅಧಿಕಾರಕ್ಕೇರಿತ್ತು.

ಈ ನಿಟ್ಟಿನಲ್ಲಿ ನಿನ್ನೆ ಬಹಿರಂಗವಾಗಿರುವ ಪೆಗಾಸೆಸ್ ಸ್ಪೈವೇರ್ ಪ್ರಕರಣವು ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

Join Whatsapp
Exit mobile version