Home ಟಾಪ್ ಸುದ್ದಿಗಳು ನಾಡಿನಾದ್ಯಂತ ಸಂಭ್ರಮದ ಈದ್ ಆಚರಣೆ

ನಾಡಿನಾದ್ಯಂತ ಸಂಭ್ರಮದ ಈದ್ ಆಚರಣೆ

ಬೆಂಗಳೂರು, ಜು.21: ತ್ಯಾಗ ಬಲಿದಾನದ ಸಂಕೇತವಾಗಿರುವ ಈದುಲ್ ಅದ್ ಹಾ (ಬಕ್ರೀದ್) ಹಬ್ಬವನ್ನು ಮುಸ್ಲಿಮರು ದೇಶಾದ್ಯಂತ ಬುಧವಾರ ಸಂಭ್ರಮದಿಂದ ಆಚರಿಸಿದರು.


ಮುಸ್ಲಿಮರು ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಿ ಮಸೀದಿಗಳಲ್ಲಿ ಸಾಮೂಹಿಕ ಈದ್ ನಮಾಝ್ ನಿರ್ವಹಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಈದ್ಗಾಗಳಲ್ಲಿ ನಮಾಝ್ ಗೆ ಅವಕಾಶ ನೀಡಿರಲಿಲ್ಲ.
ಮಸೀದಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇಕಡಾ 50ರಷ್ಟು ಜನರಿಗೆ ನಮಾಝ್ ಗೆ ಅವಕಾಶ ನೀಡಲಾಗಿತ್ತು.
65 ವರ್ಷ ಪ್ರಾಯ ಮೇಲ್ಪಟ್ಟವರು ಮತ್ತು 10 ವರ್ಷ ಕಡಿಮೆ ವಯಸ್ಸಿನ ಮಕ್ಕಳಿಗೆ ಮಸೀದಿಗೆ ಪ್ರವೇಶವಿರಲಿಲ್ಲ.

Join Whatsapp
Exit mobile version