Home ಟಾಪ್ ಸುದ್ದಿಗಳು ವಿಮಾನದ ನೆಲಹಾಸಿನ ಮೇಲೆಯೇ ಮಲ, ಮೂತ್ರ ವಿಸರ್ಜಿಸಿದ ಪ್ರಯಾಣಿಕನ ಬಂಧನ

ವಿಮಾನದ ನೆಲಹಾಸಿನ ಮೇಲೆಯೇ ಮಲ, ಮೂತ್ರ ವಿಸರ್ಜಿಸಿದ ಪ್ರಯಾಣಿಕನ ಬಂಧನ

ನವದೆಹಲಿ: ಮುಂಬೈ–ದೆಹಲಿ ಏರ್ ಇಂಡಿಯಾ ವಿಮಾನದ ಹಾರಾಟದಲ್ಲಿರುವಾಗಲೇ ನೆಲಹಾಸಿನ ಮೇಲೆಯೇ ಮಲ, ಮೂತ್ರ ವಿಸರ್ಜಿಸಿದ ಆರೋಪದಡಿ ಪ್ರಯಾಣಿಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.


ಜೂನ್ 24ರಂದು ‘ಎಐಸಿ 866’ ವಿಮಾನದಲ್ಲಿ ನಡೆದಿದೆ. ಎಫ್ಐಆರ್ ನ ಪ್ರಕಾರ, ರಾಮ್ ಸಿಂಗ್ ಬಂಧಿತ ಆರೋಪಿ. ಈತ ನೆಲದ ಮೇಲೆ ಮಲ, ಮೂತ್ರವಿಸರ್ಜನೆ ಜೊತೆಗೆ 9ನೇ ಸಂಖ್ಯೆ ಸಾಲಿನ ಸೀಟುಗಳ ಮೇಲೆ ಗಲೀಜು ಎರಚಾಡಿದ್ದ.


ಈತನ ದುರ್ವರ್ತನೆಯನ್ನು ಗಮನಿಸಿದ್ದ ಸಿಬ್ಬಂದಿ ಕಠಿಣ ಎಚ್ಚರಿಕೆಯನ್ನು ನೀಡಿದ್ದರು. ಅಲ್ಲದೆ, ಪೈಲಟ್ ಈ ಬಗ್ಗೆ ಕಂಪನಿಗೆ ಮಾಹಿತಿ ನೀಡಿದ್ದರು. ವಿಮಾನ ಬರುತ್ತಿದ್ದಂತೆ ಭದ್ರತಾ ಸಿಬ್ಬಂದಿ ಆತನನ್ನು ಸ್ಥಳೀಯ ಠಾಣೆಗೆ ಕರೆದೊಯ್ದರು.

Join Whatsapp
Exit mobile version