Home ಟಾಪ್ ಸುದ್ದಿಗಳು ಮಾ.1ರಂದು ಮಧ್ಯಪ್ರದೇಶ ಸರಕಾರದಿಂದ ಕಾಗದ ರಹಿತ ಬಜೆಟ್ ಮಂಡನೆ

ಮಾ.1ರಂದು ಮಧ್ಯಪ್ರದೇಶ ಸರಕಾರದಿಂದ ಕಾಗದ ರಹಿತ ಬಜೆಟ್ ಮಂಡನೆ

ಭೋಪಾಲ್: ಮಾರ್ಚ್‌ 1ರಂದು ಮಧ್ಯಪ್ರದೇಶ ವಿತ್ತ ಸಚಿವ ಜಗದೀಶ್‌ ದೇವ್ರ ಕಾಗದ ರಹಿತ ಬಜೆಟ್‌ ಮಂಡಿಸಲಿದ್ದಾರೆ.

ಸೋಮವಾರ ಬಜೆಟ್‌ ಅಧಿವೇಶನ ಆರಂಭವಾಗಿದ್ದು, ರಾಜ್ಯಪಾಲ ಮಂಗೂಭಾಯಿ ಪಟೇಲ್‌ ಸದನದಲ್ಲಿ ಭಾಷಣ ಮಾಡಿದ್ದಾರೆ.

ಬಜೆಟ್‌ನ ಒಂದು ಪ್ರತಿಯನ್ನು ಮಾತ್ರ ಸದನದಲ್ಲಿ ಇಡಲಾಗುವುದು. ಶಾಸಕರಿಗೆ ಬಜೆಟ್‌ ಪ್ರತಿ ಓದಲು ಅನುಕೂಲವಾಗುವಂತೆ ಟ್ಯಾಬ್‌ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳಿಗೆ ಮತ್ತು ಪತ್ರಕರ್ತರಿಗೆ ಬಜೆಟ್‌ ಪ್ರತಿ ಇರುವ ಪೆನ್‌ಡ್ರೈವ್‌ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕಾಗದ ರಹಿತ ಬಜೆಟ್ ಮಂಡನೆ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗುತ್ತಿದೆ.

Join Whatsapp
Exit mobile version