Home ಟಾಪ್ ಸುದ್ದಿಗಳು ಪಾಕಿಸ್ತಾನದ ನಿವೃತ್ತ ಲೆಫ್ಟಿನೆಂಟ್ ಜನರಲ್ ಫೈಝ್ ಹಮೀದ್ ಮಿಲಿಟರಿ ಕಸ್ಟಡಿಗೆ

ಪಾಕಿಸ್ತಾನದ ನಿವೃತ್ತ ಲೆಫ್ಟಿನೆಂಟ್ ಜನರಲ್ ಫೈಝ್ ಹಮೀದ್ ಮಿಲಿಟರಿ ಕಸ್ಟಡಿಗೆ

ಲಾಹೋರ್: ಪಾಕಿಸ್ತಾನದ ಮಾಜಿ ಬೇಹುಗಾರಿಕಾ ಮುಖ್ಯಸ್ಥ, ನಿವೃತ್ತ ಲೆಫ್ಟಿನೆಂಟ್ ಜನರಲ್ ಫೈಝ್ ಹಮೀದ್ ಅವರನ್ನು ಮಿಲಿಟರಿ ಕಸ್ಟಡಿಗೆ ತೆಗೆದುಕೊಂಡಿದ್ದು, ಕೋರ್ಟ್ ಮಾರ್ಷಲ್ ಪ್ರಾರಂಭಿಸಲಾಗಿದೆ.

ನಿವೃತ್ತಿಯ ನಂತರ ಪಾಕಿಸ್ತಾನದ ಸೇನಾ ಕಾಯಿದೆಯ ಉಲ್ಲಂಘನೆ ಮಾಡಿ, ಸಿಟಿ ವಸತಿ ಯೋಜನೆಯಲ್ಲಿ ಹಗರಣ ಮಾಡಿದ್ದಾರೆಂದು ಆರೋಪಿಸಿ ಪಾಕಿಸ್ತಾನದ ಮಾಜಿ ಗುಪ್ತಚರ ಮುಖ್ಯಸ್ಥ ಫೈಝ್ ಹಮೀದ್ ಅವರನ್ನು ಮಿಲಿಟರಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.

ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾಜಿ ಗುಪ್ತಚರ ಮುಖ್ಯಸ್ಥರ ವಿರುದ್ಧ ಕೋರ್ಟ್ ಮಾರ್ಷಲ್ ಪ್ರಾರಂಭಿಸಲಾಗಿದೆ. ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ (ನಿವೃತ್ತ) ವಿರುದ್ಧ ಮಾಡಿದ ಟಾಪ್ ಸಿಟಿ ಕೇಸ್‌ನಲ್ಲಿನ ದೂರುಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಅನುಸರಿಸಿ, ಪಾಕಿಸ್ತಾನದ ಸೇನೆಯು ವಿಸ್ತೃತ ತನಿಖಾ ನ್ಯಾಯಾಲಯವನ್ನು ಕೈಗೊಂಡಿದೆ ಮಾಧ್ಯಮ ತಿಳಿಸಿದೆ.

ಲೆಫ್ಟಿನೆಂಟ್ ಜನರಲ್ (ನಿವೃತ್ತ) ಹಮೀದ್ ಅವರು ಜೂನ್ 2019 ರಿಂದ ಅಕ್ಟೋಬರ್2021 ರವರೆಗೆ ಗುಪ್ತಚರ ಸಂಸ್ಥೆಯ ಮಹಾನಿರ್ದೇಶಕರಾಗಿ ನೇತೃತ್ವ ವಹಿಸಿದ್ದರು. ಈ ವೇಳೆ ಅವರು ಪ್ರಭಾವಿ ಅಧಿಕಾರಿ ಎಂದು ಪರಿಗಣಿಸಲಾಗಿತ್ತು.ಹಮೀದ್ ಅವರನ್ನು ಆಗಿನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತರೆಂದು ಪರಿಗಣಿಸಲಾಗಿದೆ. ಅವರು ಅವರನ್ನು ಮುಂದಿನ ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಲು ಬಯಸಿದ್ದರು ಎನ್ನಲಾಗಿದೆ.

Join Whatsapp
Exit mobile version