Home ಟಾಪ್ ಸುದ್ದಿಗಳು ಬಾಂಗ್ಲಾದೇಶ: ಕರ್ತವ್ಯಕ್ಕೆ ಹಾಜರಾದ ಪೊಲೀಸರು

ಬಾಂಗ್ಲಾದೇಶ: ಕರ್ತವ್ಯಕ್ಕೆ ಹಾಜರಾದ ಪೊಲೀಸರು

ಢಾಕಾ: ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆ ಮತ್ತು ದೇಶ ತೊರೆಯಲು ಕಾರಣವಾದ ವ್ಯಾಪಕ ಹಿಂಸಾಚಾರ ನಿಯಂತ್ರಿಸಲು ಕೈಗೊಂಡ ಕ್ರಮಗಳ ಬಗ್ಗೆ ಟೀಕೆ, ಖಂಡನೆ ವ್ಯಕ್ತವಾದ ಬಳಿಕ ಮುಷ್ಕರ ನಡೆಸುತ್ತಿದ್ದ ಪೊಲೀಸರು ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂಸಾಚಾರದಲ್ಲಿ 450ಕ್ಕೂ ಅಧಿಕ ಜನರು ಮೃತಪಟ್ಟಿದ್ದು,42 ಪೊಲೀಸ್ ಅಧಿಕಾರಿಗಳೂ ಅದರಲ್ಲಿ ಸೇರಿದ್ದಾರೆ. ಅಲ್ಲದೆ ಪೊಲೀಸರು ವ್ಯಾಪಕ ಟೀಕೆ ಎದುರಿಸಿದ್ದರು. ಇದರಿಂದಾಗಿ ರೋಸಿ ಹೋದ ಕರ್ತವ್ಯದಲ್ಲಿರುವ ತಮ್ಮ ಸುರಕ್ಷತೆಯನ್ನು ಖಾತರಿ ಪಡಿಸುವವರೆಗೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಪೊಲೀಸರು ಮುಸ್ಕರ ಕೈಗೊಂಡಿದ್ದರು.

ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರ ಪೊಲೀಸರ ಜೊತೆಗೆ ರವಿವಾರ ರಾತ್ರಿ ಮಾತುಕತೆ ನಡೆಸಿದ್ದು, ಬಳಿಕ ಮುಷ್ಕರ ಕೈಬಿಡಲು ಪೊಲೀಸರು ಸಮ್ಮತಿಸಿದ್ದಾರೆ. ತಾವೀಗ ಸುರಕ್ಷಿತವಾಗಿರುವ ಭಾವನೆ ಮೂಡಿರುವುದರಿಂದ ಮತ್ತೆ ಕರ್ತವ್ಯಕ್ಕೆ ಮರಳಲು ಖುಷಿಯಾಗುತ್ತಿದೆ ಎಂದು ಅಸಿಸ್ಟೆಂಟ್ ಕಮಿಷನರ್ ಸ್ನೇಹಶಿಷ್ ದಾಸ್ ಹೇಳಿದ್ದಾರೆಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Join Whatsapp
Exit mobile version