ಪಹಲ್ಗಾಮ್ ದಾಳಿ: ‘ಅಭಿರ್ ಗುಲಾಲ್’ ಸಿನಿಮಾ ಹಾಡುಗಳ ತೆಗೆದು ಹಾಕಿದ ಯೂಟ್ಯೂಬ್

- Advertisement -

ಪಾಕಿಸ್ತಾನಿ ನಟ ಫಹಾದ್ ಖಾನ್ ನಟಿಸಿರುವ ‘ಅಭಿರ್ ಗುಲಾಲ್’ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂಬ ಒತ್ತಾಯ ಜೋರಾಗುತ್ತಿರುವ ಸಮಯದಲ್ಲಿಯೇ ಆ ಸಿನಿಮಾದ ಹಾಡುಗಳನ್ನು ಯೂಟ್ಯೂಬ್ ತೆಗೆದು ಹಾಕಿದೆ.

- Advertisement -

ಪಹಲ್ಗಾಮ್ ದಾಳಿಯ ಬಳಿಕ ಬಾಲಿವುಡ್ ಸಿನಿಮಾ ‘ಅಬಿರ್ ಗುಲಾಲ್’ ನಿಷೇಧಕ್ಕೆ ಒತ್ತಾಯ ಕೇಳಿ ಬಂದಿದೆ. ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ‘ಅಬಿರ್ ಗುಲಾಲ್’ ಸಿನಿಮಾದ ಬಿಡುಗಡೆಗೆ ಅವಕಾಶ ನಿರಾಕರಿಸಿದೆ ಎನ್ನಲಾಗುತ್ತಿದೆ.

‘ಅಭಿರ್ ಗುಲಾಲ್’ ಸಿನಿಮಾ ಮೇ 9ಕ್ಕೆ ತೆರೆಗೆ ಬರಲಿದೆ. ಈ ಸಿನಿಮಾನಲ್ಲಿ ಫಹಾದ್ ಖಾನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ನಟಿ ವಾಣಿ ಕಪೂರ್ ನಾಯಕಿ. ಸಿನಿಮಾವನ್ನು ಆರತಿ ಎಸ್ ಬಾಗ್ಡಿ ನಿರ್ದೇಶನ ಮಾಡಿದ್ದಾರೆ. ಫಹಾದ್ ಖಾನ್ ಹೊರತುಪಡಿಸಿ ಸಿನಿಮಾದಲ್ಲಿ ನಟಿಸಿರುವ, ಕೆಲಸ ಮಾಡಿರುವ ಎಲ್ಲರೂ ಭಾರತೀಯರೇ ಆಗಿದ್ದಾರೆ. ಆದರೆ ಪಾಕಿಸ್ತಾನಿ ನಟ ಫಹಾದ್ ಖಾನ್ ನಟಿಸಿರುವ ಕಾರಣಕ್ಕೆ ಈಗ ಸಿನಿಮಾಕ್ಕೆ ಸಮಸ್ಯೆ ಎದುರಾಗಿದೆ.

- Advertisement -

‘ಅಭಿರ್ ಗುಲಾಲ್’ ಸಿನಿಮಾದ ಕೆಲ ಹಾಡುಗಳು ಯೂಟ್ಯೂಬ್​ನಲ್ಲಿ ಈ ಹಿಂದೆ ಬಿಡುಗಡೆ ಆಗಿತ್ತು. ಸಿನಿಮಾದ ಹಾಡುಗಳು ಚೆನ್ನಾಗಿಯೇ ಇದ್ದವು. ಆದರೆ ಇದೀಗ ಯೂಟ್ಯೂಬ್, ‘ಅಭಿರ್ ಗುಲಾಲ್’ ಸಿನಿಮಾದ ಹಾಡುಗಳನ್ನು ಡಿಲೀಟ್ ಮಾಡಿದೆ. ಯೂಟ್ಯೂಬ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆ. ಭಾರತದಲ್ಲಿ ಮಾತ್ರ ‘ಅಭಿರ್ ಗುಲಾಲ್’ ಸಿನಿಮಾದ ಹಾಡುಗಳು ಯೂಟ್ಯೂಬ್​ನಲ್ಲಿ ಕೇಳಲು ಲಭ್ಯ ಇರುವುದಿಲ್ಲ.

- Advertisement -


Must Read

Related Articles