ಬಂಟ್ವಾಳ: ಸಾಮಾಜಿಕ ಕಾರ್ಯಕರ್ತರೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ರಾಜ್ಯ ಸರ್ಕಾರ ಆತ್ಮಹತ್ಯೆ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು ಎಂದು ಎಸ್ ಡಿ ಪಿ ಐ ಬಂಟ್ವಾಳ ಅಧ್ಯಕ್ಷ ಮೂನಿಷ್ ಆಲಿ ಆಗ್ರಸಿದ್ದಾರೆ.
ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಬಂಟ್ವಾಳದ ವಾಮದಪದವಿನ ಸಾಮಾಜಿಕ ಹೋರಾಟಗಾರ ಪದ್ಮನಾಭ ಸಾಮಂತ ಆತ್ಮಹತ್ಯೆ ಪ್ರಕರಣ ಸಂಶಯಾಸ್ಪದವಾಗಿದ್ದು. ಬಂಟ್ವಾಳ ಆಶ್ರಯ ಯೋಜನೆ ಭ್ರಷ್ಟಾಚಾರ ವಿಚಾರವಾಗಿ ಈ ಹಿಂದೆ ಒಬ್ಬ ದಕ್ಷ ಅಧಿಕಾರಿಣಿಯ ರಾತ್ರೋ ರಾತ್ರಿ ಎತ್ತಂಗಡಿ ಆಗಿರುತ್ತದೆ, ಇದೀಗ ಈ ಯೋಜನೆಯ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿದ್ದವನ ನಿಗೂಢ ಸಾವಾಗಿದೆ. ರಾಜ್ಯ ಸರ್ಕಾರ ಆತ್ಮಹತ್ಯೆ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು. ಆಶ್ರಯ ಯೋಜನೆಯ ಭ್ರಷ್ಟಾಚಾರ ದ ಹಿಂದ ದೊಡ್ಡ ದೊಡ್ಡ ಕುಲಗಳ ಕೈವಾಡವಿದೆ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುವುದರಿಂದ ಉನ್ನತ ಮಟ್ಟದ ತನಿಖೆಗೊಳಪಡಿಸಬೇಕು ಎಂದು ಆಗ್ರಿಸಿದ್ದಾರೆ.