Home ಟಾಪ್ ಸುದ್ದಿಗಳು ಸಂಜೀವ್ ಭಟ್ ಪ್ರಕರಣ; ಪ್ರಾಮಾಣಿಕತೆ ನಿಮ್ಮನ್ನು ಹೇಗೆ ಜೈಲುಪಾಲು ಮಾಡುತ್ತದೆ ಎಂಬುದಕ್ಕೆ ಉದಾಹರಣೆ: ಇಲ್ಯಾಸ್ ಮಹಮ್ಮದ್

ಸಂಜೀವ್ ಭಟ್ ಪ್ರಕರಣ; ಪ್ರಾಮಾಣಿಕತೆ ನಿಮ್ಮನ್ನು ಹೇಗೆ ಜೈಲುಪಾಲು ಮಾಡುತ್ತದೆ ಎಂಬುದಕ್ಕೆ ಉದಾಹರಣೆ: ಇಲ್ಯಾಸ್ ಮಹಮ್ಮದ್

ನವದೆಹಲಿ: ಸಂಜೀವ್ ಭಟ್ ಪ್ರಕರಣ, ಪ್ರಾಮಾಣಿಕತೆ ನಿಮ್ಮನ್ನು ಹೇಗೆ ಜೈಲುಪಾಲು ಮಾಡುತ್ತದೆ ಎಂಬುದಕ್ಕೆ ಉದಾಹರಣೆ ಎಂದು ಎಸ್‌ ಡಿಪಿಐ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ ಹೇಳಿದ್ದಾರೆ.

1990 ರ ಕಸ್ಟಡಿ ಸಾವಿನ ಪ್ರಕರಣದಲ್ಲಿ 2018 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಗುಜರಾತಿನ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್ ಭಟ್ ಅವರಿಗೆ ಗುಜರಾತ್‌ನ ಪಾಲನ್‌ಪುರದ ಸೆಷನ್ಸ್ ನ್ಯಾಯಾಲಯವು ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2002 ರ ಗುಜರಾತ್ ಮುಸ್ಲಿಂ ಹತ್ಯಾಕಾಂಡದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಕೈವಾಡವನ್ನು ಬಹಿರಂಗಪಡಿಸಿದ ಕ್ಷಣದಿಂದ ಸಂಜೀವ್ ಭಟ್ ಅವರಿನ್ನು ಕಾಡುವ ಸರಣಿ ಪ್ರಾರಂಭವಾಯಿತು ಎಂದು ಇಲ್ಯಾಸ್ ಮಹಮ್ಮದ್ ತುಂಬೆ ಅವರು ತಮ್ಮ ಪ್ರಕಟಣೆಯ ಮೂಲಕ ಆರೋಪಿಸಿದ್ದಾರೆ.

ತಮ್ಮ ಹಿಡಿತದಲ್ಲಿ ಅಧಿಕಾರ ಇರುವವರೆಗೂ ಸಂಜೀವ್ ಭಟ್ ಜೈಲಿನಿಂದ ಹೊರಬರುವುದು ಸಂಘಪರಿವಾರಕ್ಕೆ ಇಷ್ಟವಿಲ್ಲ. ಕಾನೂನುಗಳ ಒಳ ಮಾರ್ಗಗಳ ಮೂಲಕವೇ ಸಂಘಪರಿವಾರ ಸಂಜೀವ್‌ ಭಟ್‌ ಅವರನ್ನು ಜೈಲಿನಲ್ಲಿಡುವಲ್ಲಿ ಸಫಲವಾಗಿದೆ. ಇದು ಪ್ರಾಮಾಣಿಕತೆ ನಿಮ್ಮನ್ನು ಹೇಗೆ ಜೈಲುಪಾಲು ಮಾಡುತ್ತದೆ ಎಂಬುದಕ್ಕೆ ಉದಾಹರಣೆ ಎಂದು ತುಂಬೆ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಘಪರಿವಾರದ ಅನಾಚಾರಗಳ ಬಗ್ಗೆ ಮೌನವಾಗಿರಿ ಅಥವಾ ಭೀಕರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ ಎಂಬ ಸಂದೇಶವನ್ನು ಭಟ್ ಅವರ ಪ್ರಕರಣದ ಮೂಲಕ ಎಚ್ಚರಿಕೆಯ ರೂಪದಲ್ಲಿ ನೀಡಲಾಗುತ್ತಿದೆ ಎಂದು ತಮ್ಮ ಪ್ರಕಟಣೆಯ ಮೂಲಕ ಅಪಾದಿಸಿದ್ದಾರೆ.

Join Whatsapp
Exit mobile version