Home ಟಾಪ್ ಸುದ್ದಿಗಳು ಕರ್ನಾಟಕದಲ್ಲಿ ವಾರಕ್ಕೊಂದು ಹಗರಣ ನಡೆಯುತ್ತಿದೆ: ಶೋಭಾ ಕರಂದ್ಲಾಜೆ

ಕರ್ನಾಟಕದಲ್ಲಿ ವಾರಕ್ಕೊಂದು ಹಗರಣ ನಡೆಯುತ್ತಿದೆ: ಶೋಭಾ ಕರಂದ್ಲಾಜೆ

ನವದೆಹಲಿ: ವಾರಕ್ಕೊಂದು ಹಗರಣ ಕರ್ನಾಟಕದಲ್ಲಿ ನಡೆಯುತ್ತಿದ್ದು, ಎಲ್ಲಾ ನಿಗಮಗಳಲ್ಲಿ ಹಣ ಎತ್ತಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

ಇಂದು(ಮಂಗಳವಾರ) ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ‘ಕರ್ನಾಟಕ, ಕಾಂಗ್ರೆಸ್ ಹೈಕಮಾಂಡ್ ನ ಎಟಿಎಂ ಆಗಿದೆ. ರಾಹುಲ್, ಸೋನಿಯಾ ಗಾಂಧಿ ಸೊಚನೆ ಮೇರೆಗೆ ಹಣ ವರ್ಗಾವಣೆ ಮಾಡಿ, ದಲಿತರ ಹಣವನ್ನು ತೆಲಂಗಾಣ ಚುನಾವಣೆಯಲ್ಲಿ ಬಳಸಲಾಗಿದೆ. ಕಾಂಗ್ರೆಸ್ ನವರು ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದು ಓಡಾಡುತ್ತಾರೆ. ಹಾಗಾದರೆ ದಲಿತರ ಹಣ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕ ಐಟಿ-ಬಿಟಿ ಎಂದು ವಿಶ್ವದಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಆದರೆ, ವಿಧಾನಸಭೆ, ಸಿಎಂ ಕಾರ್ಯಕ್ರಮಗಳಲ್ಲಿಯೇ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಲಾಗುತ್ತಿದೆ. ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿ, ಜನರ ರಕ್ಷಣೆ ಬಗ್ಗೆ ಯೋಚಿಸುತ್ತಿಲ್ಲ, ಕೇವಲ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು.

Join Whatsapp
Exit mobile version