ಬಂಗಾರದ ಬೆಲೆ ₹550ರಷ್ಟು ಹೆಚ್ಚಳ: ಪ್ರತಿ 10 ಗ್ರಾಂಗೆ ₹75,700

Prasthutha|

ನವದೆಹಲಿ: ಅಪರಂಜಿ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂಗೆ ₹550ರಷ್ಟು ಹೆಚ್ಚಳವಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಮಂಗಳವಾರ ಗರಿಷ್ಠ ₹75,700ಕ್ಕೆ ಮಾರಾಟವಾಗಿದೆ.

- Advertisement -

ಅಖಿಲ ಭಾರತ ಸರಾಫ್ ಒಕ್ಕೂಟ ಮಾಹಿತಿ ಪ್ರಕಾರ, ಹಳದಿ ಲೋಹದ ಬೆಲೆ 24 ಕ್ಯಾರೆಟ್ ನ ಪ್ರತಿ ಹತ್ತು ಗ್ರಾಂಗೆ ಸೋಮವಾರ ₹75,150 ಇತ್ತು.


ರಾಷ್ಟ್ರ ರಾಜಧಾನಿಯಲ್ಲಿ ಶೇ 99.9 ಹಾಗೂ ಶೇ 99.5 ಶುದ್ಧ ಬಂಗಾರದ ಬೆಲೆ ಪ್ರತಿ ಹತ್ತು ಗ್ರಾಂಗೆ ಕ್ರಮವಾಗಿ ₹75,700 ಹಾಗೂ ₹75,350 ರಷ್ಟು ದಾಖಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಗೆ ವ್ಯಾಪಕ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.



Join Whatsapp
Exit mobile version