Home ಟಾಪ್ ಸುದ್ದಿಗಳು ಕೇರಳ: ನದಿ ಮಧ್ಯದ ಬಂಡೆ ಮೇಲೆ ಸಿಲುಕಿದ್ದ ಮೈಸೂರಿನ ನಾಲ್ವರ ರಕ್ಷಣೆ

ಕೇರಳ: ನದಿ ಮಧ್ಯದ ಬಂಡೆ ಮೇಲೆ ಸಿಲುಕಿದ್ದ ಮೈಸೂರಿನ ನಾಲ್ವರ ರಕ್ಷಣೆ

ಪಾಲಕ್ಕಾಡ್: ನದಿಯ ಮಧ್ಯದ ಬಂಡೆಯೊಂದರಲ್ಲಿ ಸಿಲುಕಿದ್ದ ವೃದ್ಧ ಮಹಿಳೆ ಸೇರಿದಂತೆ ನಾಲ್ವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ದಿಟ್ಟ ಕಾರ್ಯಾಚರಣೆಯಲ್ಲಿ ಮಂಗಳವಾರ ರಕ್ಷಿಸಿರುವ ಘಟನೆ ಪಾಲಕ್ಕಾಡ್ ಜಿಲ್ಲೆಯ ಚಿತ್ತೂರಿನಲ್ಲಿ ನಡೆದಿದೆ.


ಚಿತ್ತೂರು ನದಿಯ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೂಲತಾರಾ ನಿಯಂತ್ರಕ ಪ್ರದೇಶದಿಂದ ನೀರು ಬಿಡುಗಡೆ ಮಾಡಿದ್ದರಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಎಚ್ಚರಿಕೆಯಿಂದ ಬಂಡೆಯನ್ನು ತಲುಪಿದ್ದು, ಹಗ್ಗದ ಮೂಲಕ ಅದನ್ನು ನದಿ ದಡಕ್ಕೆ ಸಂಪರ್ಕಿಸಿದ್ದಾರೆ. ಲೈಫ್ ಜಾಕೆಟ್ ಗಳನ್ನು ಒದಗಿಸಲಾದ ನಾಲ್ವರು ವ್ಯಕ್ತಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಹಗ್ಗಕ್ಕೆ ಜೋಡಿಸಲಾದ ಗಾಳಿ ತುಂಬಿದ ರಕ್ಷಣಾ ಟ್ಯೂಬ್ ಗಳ ಮೇಲೆ ದಡಕ್ಕೆ ತರಲಾಯಿತು.

Join Whatsapp
Exit mobile version