Home ಟಾಪ್ ಸುದ್ದಿಗಳು ಲಕ್ಷದ್ವೀಪದಲ್ಲಿ 100 ಮನೆಗಳನ್ನು ತೆರವುಗೊಳಿಸಲು ನೋಟಿಸ್: ಜನರಿಂದ ಆಕ್ರೋಶ

ಲಕ್ಷದ್ವೀಪದಲ್ಲಿ 100 ಮನೆಗಳನ್ನು ತೆರವುಗೊಳಿಸಲು ನೋಟಿಸ್: ಜನರಿಂದ ಆಕ್ರೋಶ

ಲಕ್ಷದ್ವೀಪ: ಲಕ್ಷದ್ವೀಪದ ಆಡಳಿತಾಧಿಕಾರಿಯ ಹಿಂದುತ್ವ ಹೇರಿಕೆಯ ಪ್ರಯತ್ನದ ವಿರುದ್ಧ ದೇಶದ ಜನರ ಆಕ್ರೋಶದ ಮಧ್ಯೆಯೇ ದ್ವೀಪದಲ್ಲಿ 100ಕ್ಕೂ ಅಧಿಕ ಮನೆಗಳನ್ನು ತೆರವುಗೊಳಿಸಲು ಅಲ್ಲಿನ ಸರ್ಕಾರ ಮುಂದಾಗಿದೆ.


ಲಕ್ಷದ್ವೀಪ ಆಡಳಿತ ಇತ್ತೀಚೆಗೆ ಹೊರಡಿಸಿರುವ ಆದೇಶದಲ್ಲಿ, ಸಮುದ್ರ ತೀರದಿಂದ 20 ಮೀಟರ್ ಒಳಗೆ ಇರುವ ನೂರು ಮನೆಗಳನ್ನು ಧ್ವಂಸ ಮಾಡಲು ಸೂಚಿಸಿದೆ. ತೀರದಿಂದ 20 ಮೀಟರ್ ಒಳಗೆ ಇರುವ ಶೌಚಾಲಯಗಳು ಮತ್ತು ದ್ವೀಪಗಳಲ್ಲಿ ನಿರ್ಮಿಸಲಾಗಿರುವ ಮೀನುಗಾರಿಕಾ ಶೆಡ್ ಗಳನ್ನು ಧ್ವಂಸ ಮಾಡಲು ಹೇಳಿದೆ.


ಲಕ್ಷದ್ವೀಪದ ಆಡಳಿತ ಕೇಂದ್ರವಾಗಿರುವ ಕವರತ್ತಿಯ 102 ಮನೆಗಳಿಗೆ ನೋಟಿಸ್ ನೀಡಲಾಗಿದೆ. ಅಷ್ಟೇ ಅಲ್ಲದೆ ಇನ್ನೂ 52 ಮನೆಗಳಿಗೆ ಶೀಘ್ರದಲ್ಲೇ ನೋಟಿಸ್ ನೀಡಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೆರಿಯಮ್, ಸುಹೆಲಿ ಪಾರ್ ಮತ್ತು ಕಲ್ಪೇನಿ ದ್ವೀಪಗಳ ಅನೇಕ ನಿವಾಸಿಗಳಿಗೆ ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು ಇದೇ ರೀತಿಯ ನೋಟಿಸ್ ನೀಡಿದ್ದಾರೆ.


ಈ ನೋಟಿಸ್ ಗೆ ಜೂನ್ 30ರೊಳಗೆ ಉತ್ತರಿಸಬೇಕು. ಒಂದು ವೇಳೆ ನೋಟಿಸ್ ನೀಡಿದ ಕಟ್ಟಡಗಳನ್ನು ತೆರವುಗೊಳಿಸಲು ವಿಫಲವಾದರೆ ಅದನ್ನು ಅಧಿಕಾರಿಗಳೇ ಧ್ವಂಸ ಮಾಡಲಿದ್ದು, ಅದಕ್ಕೆ ತಗುಲುವ ವೆಚ್ಚವನ್ನು ಕಟ್ಟಡದ ಮಾಲಿಕರೇ ಭರಿಸಬೇಕಾಗುತ್ತದೆ. ಸಮುದ್ರ ತೀರದಿಂದ 50 ಮೀಟರ್ ದೂರವಿರುವ ಕಟ್ಟಡಗಳಿಗೂ ನೋಟಿಸ್ ಬಂದಿದೆ. ತೀರದಿಂದ 50 ಮೀಟರ್ ದೂರದಲ್ಲೆ ನಿರ್ಮಿಸಲ್ಪಟ್ಟಿತ್ತಾದರೂ, ಸಮುದ್ರ ಕೊರೆತದಿಂದ ಅದರ ಅಂತರ ಕಡಿಮೆಯಾಗಿದೆ ಎಂದು ದ್ವೀಪವಾಸಿಗಳು ಹೇಳಿದ್ದಾರೆ.


ಪ್ರಪುಲ್ ಪಟೇಲ್ ನೇತೃತ್ವದ ಹೊಸ ಲಕ್ಚದ್ವೀಪ ಆಡಳಿತವು ಪರಿಚಯಿಸಿದ ಅನೇಕ ಕಠಿಣ ಕಾನೂನುಗಳಲ್ಲಿ ಇದು ಕೂಡ ಒಂದಾಗಿದೆ. ಲಕ್ಷದ್ವೀಪ ಆಡಳಿತವು ಮೀನುಗಾರರ ಶೆಡ್ ಗಳನ್ನು ಈ ಮೊದಲು ಕೂಡ ಇದೇ ಮಾದರಿಯಲ್ಲಿ ಕಿತ್ತು ಹಾಕಿತ್ತು. ಇದು ಭಾರತದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

Join Whatsapp
Exit mobile version