Home ಟಾಪ್ ಸುದ್ದಿಗಳು ದೆಹಲಿ ಡಿಸಿಎಂ ಮನೀಶ್‌ ಸಿಸೋಡಿಯಾ ಶಾಲಾ ಭೇಟಿ ವೇಳೆ ಬಿಜೆಪಿ ಕಾರ್ಯಕರ್ತರಿಂದ ದಾಂಧಲೆ; ವಾಹನಕ್ಕೆ ಹಾನಿ

ದೆಹಲಿ ಡಿಸಿಎಂ ಮನೀಶ್‌ ಸಿಸೋಡಿಯಾ ಶಾಲಾ ಭೇಟಿ ವೇಳೆ ಬಿಜೆಪಿ ಕಾರ್ಯಕರ್ತರಿಂದ ದಾಂಧಲೆ; ವಾಹನಕ್ಕೆ ಹಾನಿ

ನವದೆಹಲಿ : ಇಲ್ಲಿನ ರೋಹ್ಟಾಸ್‌ ನಗರದ ಶಾಲೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಬಿಜೆಪಿ ಕಾರ್ಯಕರ್ತರು ತನ್ನ ಮೇಲೆ ದಾಳಿ ಮಾಡಿ, ಸರಕಾರಿ ವಾಹನಕ್ಕೆ ಹಾನಿ ಎಸಗಿದ್ದಾರೆ ಎಂದು ದೆಹಲಿ ಡಿಸಿಎಂ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರು ಶಾಲೆಯೊಳಗೆ ಗೇಟ್‌ ಮುರಿದು ನುಗ್ಗಿದ್ದಾರೆ ಮತ್ತು ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಸಿಸೋಡಿಯಾ ಟ್ವೀಟ್‌ ಮಾಡಿದ್ದಾರೆ.

ಇಂದು ಬಿಜೆಪಿ ಕಾರ್ಯಕರ್ತರು ಮತ್ತು ಗೂಂಡಾಗಳು ರೋಹ್ಟಾಸ್‌ ನಗರದ ಶಾಲೆಯಲ್ಲಿ ನಿರ್ಮಾಣ ಕಾಮಗಾರಿಗೆ ವಿರೋಧ ಮಾಡುತ್ತಿದ್ದಾರೆ ಮತ್ತು ಕಟ್ಟಡದಲ್ಲಿ ದಾಂಧಲೆ ಎಸಗಿದ್ದಾರೆ. ಅವರು ನನ್ನ ಸರಕಾರಿ ವಾಹನಕ್ಕೆ ಹಾನಿ ಎಸಗಿದ್ದಾರೆ ಮತ್ತು ಶಿಕ್ಷಕಿಯರು ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮನೀಶ್‌ ಸಿಸೋಡಿಯಾ ಟ್ವೀಟ್‌ ಮಾಡಿದ್ದಾರೆ.

ಯಾಕೆ ಬಿಜೆಪಿ ಕಾರ್ಯಕರ್ತರು ಶಿಕ್ಷಣ ಮತ್ತು ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ವಿರೋಧಿಸುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.  

            ʼ

Join Whatsapp
Exit mobile version