Home ಟಾಪ್ ಸುದ್ದಿಗಳು ನಾರ್ವೆ | ಫೈಝರ್ ಲಸಿಕೆ ಸ್ವೀಕರಿಸಿದವರಲ್ಲಿ 23 ಮಂದಿ ಸಾವು; ಹಲವರಿಗೆ ಅಡ್ಡಪರಿಣಾಮ

ನಾರ್ವೆ | ಫೈಝರ್ ಲಸಿಕೆ ಸ್ವೀಕರಿಸಿದವರಲ್ಲಿ 23 ಮಂದಿ ಸಾವು; ಹಲವರಿಗೆ ಅಡ್ಡಪರಿಣಾಮ

ನಾರ್ವೆ : ನಾರ್ವೆ ದೇಶದಲ್ಲಿ ಫೈಝರ್ ಅಭಿವೃದ್ಧಿ ಪಡಿಸಿದ ಕೋವಿಡ್ ಲಸಿಕೆ ತೆಗೆದುಕೊಂಡಿರುವ 23 ಮಂದಿ ಸಾವಿಗೀಡಾಗಿದ್ದು, ಅನೇಕರ ಮೇಲೆ ಅಡ್ಡಪರಿಣಾಮ ಬೀರಿದೆ ಎಂದು ವರದಿಯಾಗಿದೆ.

ಮೃತ 23 ಮಂದಿಯಲ್ಲಿ ಹಲವರು ವೃದ್ಧರು ಎನ್ನಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಫೈಝರ್ ಲಸಿಕೆಯಿಂದ ಉಂಟಾಗಿರುವ ಅಡ್ಡಪರಿಣಾಮಗಳಿಂದ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಅಲ್ಲದೆ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮೃತರಾದವರಲ್ಲಿ ಹಲವರು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದವರು ಎನ್ನಲಾಗಿದೆ.

ನಾರ್ವೆ ದೇಶದಲ್ಲಿ ಡಿ.30ರಂದು ಸಾವಿರಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದ್ದು ಅವರಲ್ಲಿ 23 ಮಂದಿ ಸಾವಿಗೀಡಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ನಾರ್ವೆ ಸರ್ಕಾರ ಆದೇಶ ಹೊರಡಿಸಿದೆ.   

Join Whatsapp
Exit mobile version