Home ಟಾಪ್ ಸುದ್ದಿಗಳು ಶರಣಾಗುವ ಮಾತೇ ಇಲ್ಲ: ಇಸ್ರೇಲ್ ಬೆದರಿಕೆಗೆ ಹಿಜ್ಬುಲ್ಲಾ ಖಡಕ್ ಪ್ರತಿಕ್ರಿಯೆ

ಶರಣಾಗುವ ಮಾತೇ ಇಲ್ಲ: ಇಸ್ರೇಲ್ ಬೆದರಿಕೆಗೆ ಹಿಜ್ಬುಲ್ಲಾ ಖಡಕ್ ಪ್ರತಿಕ್ರಿಯೆ

0

ಬೈರೂತ್‌: ಶಸ್ತ್ರಾಸ್ತ್ರ ತ್ಯಜಿಸುವಂತೆ ಇಸ್ರೇಲ್‌ ಒಡ್ಡುತ್ತಿರುವ ಬೆದರಿಕೆಗಳಿಗೆ ಹೆದರಿ ಶರಣಾಗುವುದಿಲ್ಲ. ಶಸ್ತ್ರಗಳನ್ನು ಕೆಳಗಿಟ್ಟು ತಲೆ ಬಾಗುವುದಿಲ್ಲ ಎಂದು ಹಿಜ್ಬುಲ್ಲಾ ಸಂಘಟನೆ ನಾಯಕ ನಯೀಮ್‌ ಖ್ವಾಸೆಮ್‌ ಹೇಳಿದ್ದಾರೆ.

ಹಿಜ್ಬುಲ್ಲಾದ ಭದ್ರಕೋಟೆ ಎನಿಸಿರುವ ಬೈರೂತ್‌ನ ಉಪನಗರಗಳಲ್ಲಿ ಶಿಯಾ ಮುಸ್ಲಿಮರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಬೆಂಬಲಿಗರನ್ನುದ್ದೇಶಿಸಿ ದೂರದರ್ಶನದಲ್ಲಿ ಮಾತನಾಡಿರುವ ನಯೀಮ್‌, ‘ಇಂತಹ ಬೆದರಿಕೆಗಳಿಂದ ನಮ್ಮನ್ನು ಶರಣಾಗತರನ್ನಾಗಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ದೀರ್ಘ ಸಮಯದಿಂದ ಸಂಘಟನೆಯ ನಾಯಕರಾಗಿದ್ದ ಹಸನ್‌ ನಸ್ರಲ್ಲಾ ಅವರು ಕಳೆದ ವರ್ಷ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಹತ್ಯೆಯಾಗಿದ್ದಾರೆ. ನಂತರ ಅಧಿಕಾರ ವಹಿಸಿಕೊಂಡಿರುವ ಖ್ವಾಸೆಮ್‌, ಹೋರಾಟವನ್ನು ಕೊನೆಗೊಳಿಸಲು ನವೆಂಬರ್‌ನಲ್ಲಿ ಮಾಡಿಕೊಂಡಿರುವ ಕದನ ವಿರಾಮವನ್ನು ಇಸ್ರೇಲ್‌ ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಟಾಮ್‌ ಬರಾಕ್‌ ಅವರು ಬೈರೂತ್‌ಗೆ ಸೋಮವಾರ ಆಗಮಿಸುವ ನಿರೀಕ್ಷೆ ಇದೆ. ಇದೇ ವೇಳೆ, ಖ್ವಾಸೆಮ್‌ ಭಾಷಣ ಪ್ರಸಾರವಾಗಿದೆ.

ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯನ್ನು ವರ್ಷಾಂತ್ಯದೊಳಗೆ ನಿಶ್ಯಸ್ತ್ರಗೊಳಿಸಬೇಕು ಎಂದು ಬರಾಕ್‌ ಈಗಾಗಲೇ ಒತ್ತಾಯಿಸಿದ್ದಾರೆ. ಈ ಕುರಿತು ಅಧಿಕಾರಿಗಳು ಪ್ರತಿಕ್ರಿಯಿಸುವ ಸಾಧ್ಯತೆ ಇದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಲೆಬನಾನ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version