ಮಾಲೆಗಾಂವ್‌ ಬಾಂಬ್ ಸ್ಫೋಟದ ಆರೋಪಿ ಸುಧಾಕರ್ ದ್ವಿವೇದಿಯ ಜಾಮೀನು ರದ್ದು ಅರ್ಜಿ ತಿರಸ್ಕರಿಸಿದ NIA

Prasthutha|

ಮುಂಬೈ: ಮಾಲೆಗಾಂವ್ ಸ್ಫೋಟದ ಆರೋಪಿ ಸುಧಾಕರ್ ದ್ವೀವೇದಿಗೆ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

- Advertisement -

ಆರೋಪಿಯು ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ಬಿಟ್ಟು ಹೋಗುವಂತಿಲ್ಲ ಎಂಬ ಷರತ್ತು ಬಾಂಬ್ ಸ್ಫೋಟ ಪ್ರಕರಣದ ಆರೋಪಿಗೆ 2017ರಲ್ಲಿ ಜಾಮೀನು ನೀಡಲಾಗಿತ್ತು.’ಕೋರ್ಟ್ ಅನುಮತಿ ಪಡೆಯದೆ, ಷರತ್ತು ಉಲ್ಲಂಘಿಸಿ ಸುಧಾಕರ್ ನೇಪಾಳಕ್ಕೆ ತೆರಳಿದ್ದಾರೆ. ಹಾಗಾಗಿ ಜಾಮೀನು ರದ್ದುಗೊಳಿಸಬೇಕು’ ಎಂದು ಕೋರಿ ಸಂತ್ರಸ್ತರೊಬ್ಬರ ತಂದೆ ನಿಸಾರ್ ಅಹಮದ್ ಬಿಲಾಲ್‌ ವಕೀಲರ ಮೂಲಕ ಮನವಿ ಸಲ್ಲಿಸಿದ್ದಾರೆ.

ಮನವಿಯ ಜೊತೆ ನೇಪಾಳ ಪ್ರವಾಸ ಕುರಿತು ಫೋಟೊಗಳನ್ನು ಸಹ ಕೋರ್ಟ್‌ಗೆ ಸಲ್ಲಿಸಿದ್ದರು. ಅರ್ಜಿ ತಿರಸ್ಕರಿಸಿದ ವಿಶೇಷ ನ್ಯಾಯಾಧೀಶ ಎ.ಕೆ.ಲಹೋಟಿ, ಇನ್ನು ಮುಂದೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸದಂತೆ ಆರೋಪಿಗೆ ಸಲಹೆ ನೀಡಿದರು.

Join Whatsapp
Exit mobile version