Home ಟಾಪ್ ಸುದ್ದಿಗಳು ಕೋಲಿನಿಂದ ವಿದ್ಯುತ್ ಲೈನ್ ಸ್ಪರ್ಶಿಸಿದ ವ್ಯಕ್ತಿ ಸಾವು

ಕೋಲಿನಿಂದ ವಿದ್ಯುತ್ ಲೈನ್ ಸ್ಪರ್ಶಿಸಿದ ವ್ಯಕ್ತಿ ಸಾವು

ನೊಯ್ಡಾ: ವ್ಯಕ್ತಿಯೊಬ್ಬರು ತನ್ನ ಮನೆಯ ಮುಂದೆ ಮರದ ಕೋಲಿನಿಂದ ಆಕಸ್ಮಿಕವಾಗಿ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಬುಧವಾರ ಸಂಜೆ ದೇವಸ್ಥಾನದ ರಥೋತ್ಸವಕ್ಕೆ ಸಿದ್ಧತೆ ನಡೆಸಿದ್ದ ದೇವೇಂದ್ರ ಎಂಬ ವ್ಯಕ್ತಿ ಕೋಲಿನಿಂದ ಆಕಸ್ಮಿಕವಾಗಿ ಲೈನನ್ನು ಮುಟ್ಟಿದ್ದ. ಆತನಿಗೇ ತಿಳಿಯದಂತೆ ಬಿದಿರಿನ ಕೋಲಿಗೆ ಕರೆಂಟ್ ಲೈನ್ ತಾಗಿ ಈ ಘಟನೆ ನಡೆದಿದೆ. ಇತ್ತೀಚೆಗೆ ಸುರಿದ ಮಳೆಯಿಂದ ತೇವವಾಗಿದ್ದ ಕಂಬವು 33KV ವಿದ್ಯುತ್ ತಂತಿಗೆ ತಾಗುತ್ತಿದ್ದಂತೆ ಆತನಿಗೆ ಕರೆಂಟ್ ಹೊಡೆದಿದೆ. ಎಲ್ಲರೂ ಪೂಜೆಯ ತಯಾರಿಯಲ್ಲಿ ನಿರತರಾಗಿದ್ದರು. ಆ ವೇಳೆ ಈ ಘಟನೆ ನಡೆದಿದೆ.

Join Whatsapp
Exit mobile version