Home ಟಾಪ್ ಸುದ್ದಿಗಳು ದಕ್ಷಿಣ ಫೆಸಿಫಿಕ್ ನಲ್ಲಿ ಭೀಕರ ಭೂಕಂಪ | ನ್ಯೂಝಿಲ್ಯಾಂಡ್ ನಲ್ಲಿ ಸುನಾಮಿ ಎಚ್ಚರಿಕೆ

ದಕ್ಷಿಣ ಫೆಸಿಫಿಕ್ ನಲ್ಲಿ ಭೀಕರ ಭೂಕಂಪ | ನ್ಯೂಝಿಲ್ಯಾಂಡ್ ನಲ್ಲಿ ಸುನಾಮಿ ಎಚ್ಚರಿಕೆ

ಸಿಡ್ನಿ : ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆ ಹೊಂದಿದ್ದ ಭೀಕರ ಭೂಕಂಪ ದಕ್ಷಿಣ ಫೆಸಿಫಿಕ್ ನಲ್ಲಿ ಗುರುವಾರ ಮಧ್ಯರಾತ್ರಿ ಸಂಭವಿಸಿದ್ದು, ಈ ಪ್ರದೇಶದ ದ್ವೀಪ ರಾಷ್ಟ್ರಗಳಿಗೆ ಸುನಾಮಿ ಭೀತಿಯುಂಟಾಗಿದೆ.

ನ್ಯೂ ಕಲೆಡೋನಿಯಾದಿಂದ 415 ಕಿ.ಮೀ. ಪೂರ್ವದಲ್ಲಿ, 10 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ. “ಅಪಾಯಕಾರಿ ಸುನಾಮಿ ಅಲೆಗಳು ಕಡಲ ತೀರವನ್ನು ಅಪ್ಪಳಿಸಲಿವೆ” ಎಂದು ಅಮೆರಿಕ ಸರಕಾರದ ಎನ್ ಡಬ್ಲ್ಯುಎಸ್ ಫೆಸಿಫಿಕ್ ಸುಮಾನಿ ಮುನ್ನೆಚ್ಚರಿಕೆ ಕೇಂದ್ರ ಎಚ್ಚರಿಕೆ ನೀಡಿದೆ.

ಫ್ಯುಜಿ, ನ್ಯೂಝಿಲ್ಯಾಂಡ್ ಮತ್ತು ವನೂತು ಪ್ರದೇಶಗಳಲ್ಲಿ ಸಾಮಾನ್ಯ ತೆರೆ ಮಟ್ಟಕ್ಕಿಂತ 0.3 ಮೀಟರ್ ನಿಂದ ಒಂದು ಮೀಟರ್ ಅಧಿಕ ಎತ್ತರದ ಅಲೆಗಳು ಅಪ್ಪಳಿಸಲಿವೆ ಎಂದು ಅಂದಾಜಿಸಿದೆ.

ಸುನಾಮಿ ಸೃಷ್ಟಿಯಾಗಿರುವುದನ್ನು ಆಸ್ಟ್ರೇಲಿಯ ಕೂಡ ದೃಢಪಡಿಸಿದೆ. ನ್ಯೂಝಿಲ್ಯಾಂಡ್ ನ ರಾಷ್ಟ್ರೀಯ ತುರ್ತು ನಿರ್ವಹಣೆ ಏಜೆನ್ಸಿ ಕೂಡಾ ಕಡಲ ತೀರದ ಜನ ಸುರಕ್ಷಿತ ತಾಣಗಳಿಗೆ ಹೋಗುವಂತೆ ಸೂಚಿಸಿದೆ.  

Join Whatsapp
Exit mobile version