Home ಟಾಪ್ ಸುದ್ದಿಗಳು ಕೊನೆಯುಸಿರವರೆಗೂ ಬಂಗಾಳದಲ್ಲಿ ಬಿಜೆಪಿ ಗೆಲ್ಲಲು ಬಿಡುವುದಿಲ್ಲ : ಮಮತಾ ಬ್ಯಾನರ್ಜಿ

ಕೊನೆಯುಸಿರವರೆಗೂ ಬಂಗಾಳದಲ್ಲಿ ಬಿಜೆಪಿ ಗೆಲ್ಲಲು ಬಿಡುವುದಿಲ್ಲ : ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಧಿಕಾರಕ್ಕೆ ಬರಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ರಾಜ್ಯದಲ್ಲಿ ಗಲಭೆಗಳನ್ನು ಪ್ರಚೋದಿಸುವುದಕ್ಕೆ ಸಮಾನವಾಗಿದೆ ಮತ್ತು ತಾನು ಬದುಕಿರುವವರೆಗೂ ಅದಕ್ಕೆ ಅನುಮತಿಸುವುದಿಲ್ಲ ಎಂದು ಮಾಲ್ಡಾದಲ್ಲಿ ನಡೆದ ತೃಣಮೂಲ ಕಾಂಗ್ರೆಸ್ ರ್ಯಾಲಿಯಲ್ಲಿ ಮಾತನಾಡುತ್ತಾ ಮಮತಾ ಹೇಳಿದ್ದಾರೆ.

‘ನಾನು ದುರ್ಬಲ ಎಂದು ಯಾರೂ ಭಾವಿಸಬೇಡಿ, ನಾನು ಹೆದರುವವಳಲ್ಲ. ಬಂಗಾಳದ ಹುಲಿಯಂತೆ ಕೊನೆಯವರೆಗೂ ತಲೆ ಎತ್ತಿ ನಡೆಯುತ್ತೇನೆ. ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಗಲಭೆಗಳನ್ನು ಪ್ರಚೋದಿಸುವುದಕ್ಕೆ ಸಮಾನವಾಗಿದೆ. ನೀವು ಗಲಭೆಯನ್ನು ಬಯಸುವುದಾದರೆ ಬಿಜೆಪಿಗೆ ಮತ ಚಲಾಯಿಸಬಹುದು. ಆದರೆ ನಿಮಗೆ ಮಮತಾಳನ್ನು ಸೋಲಿಸಲು ಸಾಧ್ಯವಿಲ್ಲ. ಏಕೆಂದರೆ ನಾನು ಒಬ್ಬಂಟಿಯಲ್ಲ. ನಾನು ಬದುಕಿರುವವರೆಗೂ ಬಿಜೆಪಿಯನ್ನು ಇಲ್ಲಿ ಬೆಳೆಯಲು ಬಿಡುವುದಿಲ್ಲ” ಎಂದು ಮಮತಾ ಹೇಳಿದ್ದಾರೆ.

Join Whatsapp
Exit mobile version