Home ಟಾಪ್ ಸುದ್ದಿಗಳು ರಾಜಕೀಯ ಪ್ರತಿಸ್ಪರ್ಧಿಗಳನ್ನು ಹೆಣೆಯಲು ಕೇಂದ್ರೀಯ ಸಂಸ್ಥೆಗಳನ್ನು ನಾಚಿಕೆಯಿಲ್ಲದೆ ದುರ್ಬಳಕೆ: ಯಶವಂತ್ ಸಿನ್ಹಾ ವಾಗ್ದಾಳಿ

ರಾಜಕೀಯ ಪ್ರತಿಸ್ಪರ್ಧಿಗಳನ್ನು ಹೆಣೆಯಲು ಕೇಂದ್ರೀಯ ಸಂಸ್ಥೆಗಳನ್ನು ನಾಚಿಕೆಯಿಲ್ಲದೆ ದುರ್ಬಳಕೆ: ಯಶವಂತ್ ಸಿನ್ಹಾ ವಾಗ್ದಾಳಿ

ನವದೆಹಲಿ: ರಾಜಕೀಯ ಪ್ರತಿಸ್ಪರ್ಧಿಗಳನ್ನು ಹೆಣೆಯಲು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚಂಡೀಗಢದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡ ಅವರ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರನ್ನು ಭೇಟಿಯಾದ ವೇಳೆ ಸಿನ್ಹಾ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ನಾನು ಇಂದು ನೋಡುತ್ತಿರುವ ರೀತಿಯಲ್ಲಿ ಸರ್ಕಾರಿ ಏಜೆನ್ಸಿಗಳ ಭಯೋತ್ಪಾದನೆಯನ್ನು ಕಳೆದ 60 ವರ್ಷಗಳಲ್ಲಿ ಎಂದಿಗೂ ನೋಡಿರಲಿಲ್ಲ. ನಾನು ಐದು ವರ್ಷಗಳ ಕಾಲ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದ್ದೇನೆ. ತನ್ನ ರಾಜಕೀಯ ಎದುರಾಳಿಗಳನ್ನು ಹೆಣೆಯಲು ಇಡಿ, ಐಟಿ ಇಲಾಖೆ ಸೇರಿದಂತೆ ಇನ್ನಿತರ ಸಂಸ್ಥೆಗಳನ್ನು ದುರುಪಯೋಗಪಡಿಸಲು ಬಳಸಲು ಮನಸ್ಸು ಬಂದಿರಲಿಲ್ಲ. ಆದರೆ ಇತ್ತೀಚೆಗೆ ಈ ಎರಡೂ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಅಲ್ಲದೆ, ಭಾರತದ 15ನೇ ರಾಷ್ಟ್ರಪತಿ ಚುನಾವಣೆಯು ಅತ್ಯಂತ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ನಡೆಯುತ್ತಿದೆ. 1970 ರ ದಶಕದ ಮಧ್ಯಭಾಗದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಗಿಂತಲೂ ಕೆಟ್ಟ ಸ್ಥಿತಿ ದೇಶದಲ್ಲಿದೆ. ಸದ್ಯ ದೇಶದ ಗಣರಾಜ್ಯ ಮತ್ತು ಸಂವಿಧಾನ ಏಕಕಾಲದಲ್ಲಿ ಬೆದರಿಕೆ ಎದುರಿಸುತ್ತಿದೆ. ಆರ್ಥಿಕ ಪರಿಸ್ಥಿತಿ ಹೀನಾಯವಾಗಿದ್ದು, ಬೆಲೆಯೇರಿಕೆ ಮತ್ತು ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದು ಅವರು ಆರೋಪಿಸಿದರು.

ಪ್ರಸಕ್ತ ಭಾರತದ ಪ್ರಜಾಪ್ರಭುತ್ವದ ಗಂಭೀರ ಅಪಾಯದಲ್ಲಿದೆ ಎಂದು ಯಶವಂತ ಸಿನ್ಹಾ ತಿಳಿಸಿದ್ದಾರೆ.

Join Whatsapp
Exit mobile version