ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತುಗಳನ್ನು ಖರೀದಿಸಿದ್ದಕ್ಕಾಗಿ ನಟಿ ರಿಯಾ ಚಕ್ರವರ್ತಿ ವಿರುದ್ಧ ದೇಶದ ಮಾದಕವಸ್ತು ವಿರೋಧಿ ಏಜೆನ್ಸಿ ಬುಧವಾರ ಆರೋಪ ಹೊರಿಸಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ರಿಯಾ ಮತ್ತು ಇತರ 34 ಜನರನ್ನು ಹೈ ಪ್ರೊಫೈಲ್ ಪ್ರಕರಣದಲ್ಲಿ ಆರೋಪಿಗಳೆಂದು ದಾಖಲಿಸಲಾಗಿದೆ.
ಸುಶಾಂತ್ ಸಿಂಗ್ ಅವರಿಗೆ ರಿಯಾ ಗಾಂಜಾ ಖರೀದಿಸಿರುವುದಲ್ಲದೆ, ಹಣಕಾಸಿ ನೆರವು ನೀಡಿದ್ದಾರೆ ಎಂದು ಎನ್ ಸಿಬಿ ಆರೋಪಿಸಿದೆ.
ಆರೋಪ ಸಾಬೀತಾದರೆ ರಿಯಾ ಚಕ್ರವರ್ತಿಗೆ 10 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.
ತನ್ನ ವಿರುದ್ಧದ ಆರೋಪಗಳನ್ನು ರಿಯಾ ಅಲ್ಲಗೆಳೆದಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಗಾಂಜಾ ಸೇದುತ್ತಿದ್ದರು ಎಂದು ಒಪ್ಪಿಕೊಂಡಿದ್ದರೂ ಅವುಗಳನ್ನು ಸಂಗ್ರಹಿಸಲು ಸಹಾಯ ಮಾಡಿದರು ಎಂಬುದನ್ನು ರಿಯಾ ನಿರಾಕರಿಸಿದ್ದಾರೆ.