Home ಕರಾವಳಿ ನಿದ್ರಿಸುವ ಸಿಂಹವನ್ನು ನಂಬಿರುವ ವಿರೋಧ ಪಕ್ಷಗಳು: ಮುಖ್ಯಮಂತ್ರಿ ಬೊಮ್ಮಾಯಿ ಲೇವಡಿ

ನಿದ್ರಿಸುವ ಸಿಂಹವನ್ನು ನಂಬಿರುವ ವಿರೋಧ ಪಕ್ಷಗಳು: ಮುಖ್ಯಮಂತ್ರಿ ಬೊಮ್ಮಾಯಿ ಲೇವಡಿ

ಉಡುಪಿ: ವಿರೋಧ ಪಕ್ಷಗಳು ನಿದ್ರಿಸುವ ಸಿಂಹವನ್ನು ನಂಬುವ ಸಂಸ್ಕೃತಿಯನ್ನು ನಿರಂತರವಾಗಿ ಪಾಲಿಸಿಕೊಂಡು ಬಂದಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷತೆಗೆ ತಕ್ಕಂತೆ ಬಿಜೆಪಿ ಸಶಕ್ತ ಮತ್ತು ಘರ್ಜಿಸುವ ಸಿಂಹವನ್ನು ನಂಬಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸನ್ನು ಅವರು ಲೇವಡಿ ಮಾಡಿದ್ದಾರೆ..

ಬುಧವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಲಾಂಛನವನ್ನು ವಿರೋಧ ಪಕ್ಷಗಳು ಮತ್ತು ಬಿಜೆಪಿ ನೋಡುವ ದೃಷ್ಟಿಕೋನ ವಿಭಿನ್ನವಾಗಿದೆ. ಸಾರಾನಾಥದಲ್ಲಿರುವ ಅಶೋಕ ಸ್ತಂಭದ ಮೇಲಿನ ಸಿಂಹದ ಮಾದರಿಯಂತೆಯೇ ರಾಷ್ಟ್ರಲಾಂಛನವನ್ನು ನಿರ್ಮಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಆದರೆ ವಿರೋಧ ಪಕ್ಷಗಳು ರಾಷ್ಟ್ರಲಾಂಛನ ವಿಚಾರವಾಗಿ ಸುಖಾಸುಮ್ಮನೆ ರಾಜಕೀಯ ಮಾಡುತ್ತಿದ್ದು, ಸಿಂಹ ಉಗ್ರ ವ್ಯಘ್ರ ಎಂದು ಹೇಳುತ್ತಾ ಮೊಸರಲ್ಲಿ ಕಲ್ಲು ಹುಡುಕುತ್ತಿದೆ ಎಂದು ಟೀಕಿಸಿದರು.

Join Whatsapp
Exit mobile version